ಪೆ.25 ರಿಂದ ಹೆಜಮಾಡಿ ಕೋಡಿ ಉರೂಸ್
ಪಡುಬಿದ್ರಿ: ಹೆಜಮಾಡಿ ಕೋಡಿ ಬದ್ರಿಯಾ ಜುಮಾ ಮಸೀದಿ ಹಾಗೂ ಸೈಯ್ಯದ್ ಅರಬಿ ವಲಿಯುಲ್ಲಾಹಿ ದರ್ಗಾ ಶರೀಫ್ 2 ವರ್ಷಕ್ಕೊಮ್ಮೆ ಆಚರಿಸಲಾಗುವ ಉರೂಸ್ ಸಮಾರಂಭವು ಪೆಬ್ರವರಿ 25 ರಿಂದ 26ರವರೆಗೆ ಜರುಗಲಿದೆ.
ಫೆಬ್ರವರಿ 25ರಂದು ಹೆಜಮಾಡಿ ಕೋಡಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಬುಶ್ರಾ ಕೆ.ಅಬುಬಕರ್ ಸಿದ್ದೀಕ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಲಿದ್ದು, ಇಶಾ ನಮಾಝಿನ ಬಳಿಕ ಸಯ್ಯಿದ್ ಶಿಹಾಬುದ್ದೀನ್ ತಂಙಲ್ ಮದಕ, ವಿಟ್ಲ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ.
ಪೆಬ್ರವರಿ 26 ರಂದು ನಡೆಯುವ ಸಮಾರೋಪದಲ್ಲಿ ಶಿಹಾಬುದ್ದೀನ್ ಝೈನಿ ಅಲ್ ಹೈದ್ರೊಸ್ ತಂಙಲ್ ಕಾಸಗೋಡು ನೇತ್ರತ್ವದಲ್ಲಿ ದುಆ ಮಜ್ಲಿಸ್ ನಡೆಯಲಿದೆ. ಕಣ್ಣಂಗಾರ್ ಜುಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯ ಪ್ರಸ್ತಾವಿಕ ಪ್ರವಚನಲಿದ್ದಾರೆ ಬಳಿಕ ರಾಜ್ಯಮಟ್ಟದ ಹೊನಲು ಬೆಳಕಿನ ದಪ್ ಸ್ಪರ್ದೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ
Next Story





