ಇಂದಿರಾ ಕಜೆ

ಉಪ್ಪಿನಂಗಡಿ: ಖ್ಯಾತ ವಕೀಲ ಮಹೇಶ್ ಕಜೆಯವರ ತಾಯಿ ಇಂದಿರಾ ಕಜೆ (83) ಫೆ. 24ರಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕನ್ನಡ ಸಾಹಿತ್ಯಾಸಕ್ತ, ಕಲಾವಿದ, ಸಂಘಟಕ, ಸಹಕಾರಿ ಧುರೀಣರಾಗಿದ್ದ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ "ಕೇದಾರ" ನಿವಾಸಿಯಾಗಿದ್ದ ದಿವಂಗತ ಈಶ್ವರ ಭಟ್ ಕಜೆಯವರ ಪತ್ನಿಯಾಗಿರುವ ಇಂದಿರಾ ಕಜೆಯವರು ಭಜನಾ ಮಂಡಳಿ, ವಿಶ್ವ ಹಿಂದೂ ಪರಿಷತ್ ಮೊದಲಾದ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.
ಮೃತ ಇಂದಿರಾ ಕಜೆಯವರು ಪುತ್ರರಾದ ಡಾ. ಗೋವಿಂದ ಪ್ರಸಾದ ಕಜೆ, ವಕೀಲ ಮಹೇಶ್ ಕಜೆ, ಪುತ್ರಿ ವೀಣಾ ಸರಸ್ವತಿ ಕಜೆಯವರನ್ನು ಅಗಲಿದ್ದಾರೆ.
ಮೃತರ ಮನೆಗೆ ವಿವಿಧ ರಾಜಕೀಯ ಪಕ್ಷದ ನಾಯಕರು, ಧಾರ್ಮಿಕ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
Next Story





