Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಳೆ ಎಂಬ ಮಾಯಾಂಗನೆಯ ಹಿಂದೆ...

ಮಳೆ ಎಂಬ ಮಾಯಾಂಗನೆಯ ಹಿಂದೆ...

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್25 Feb 2022 4:01 PM IST
share
ಮಳೆ ಎಂಬ ಮಾಯಾಂಗನೆಯ ಹಿಂದೆ...

ಹಾಡ್ಲಹಳ್ಳಿ ನಾಗರಾಜ್ ಅವರ ಹೊಸ ಕೃತಿಯಾದ ‘ಮಳೆಯೆಂಬ ಮಾಯಾಂಗನೆ’ಯ ಲೇಖನಗಳನ್ನು ಓದುತ್ತಾ ಓದುತ್ತಾ ನಾನು ಪ್ರಕೃತಿಯನ್ನು ಕೇಳಿಸಿಕೊಳ್ಳುತ್ತಾ ಹೋದೆ, ನನಗೆ ಜಗತ್ತಿನ ಶ್ರೇಷ್ಠ ಲೇಖಕ ‘ಮಾರ್ಕವೀಸ್’ನ ಮಳೆಯ ಕುರಿತ ಬಹಳ ಮಹತ್ವದ ಕಾದಂಬರಿ ನೆನಪಾಯಿತು.

ಕುವೆಂಪು ಕಾದಂಬರಿಯಲ್ಲಿ ಬರುವ ಆ ಕಾಡುಗಳು, ಪಾತ್ರಗಳು, ಸಣ್ಣ ಸಣ್ಣ ವಿಷಯಗಳು ಈ ಲೇಖನ ಸಂಗ್ರಹದಲ್ಲೂ ಮತ್ತೆ ಮತ್ತೆ ನನಗೆ ಕಾಣಿಸಿಕೊಂಡವು. ಅಂಥದ್ದೇ ಗ್ರಾಮೀಣ ಬದುಕು, ಅಂತದ್ದೇ ಮಲೆನಾಡ ಚಿತ್ರಗಳು ಇಲ್ಲಿಕೂಡ ನನಗೆ ನೆನಪಾದವು. ಅದನ್ನು ನಾನು ನೋಡುತ್ತಾ, ಕೇಳುತ್ತಾ ಹೋದೆ. ಗ್ರಾಮೀಣ ಪ್ರದೇಶದ ಬದುಕು ಅದರಲ್ಲೂ ಮಲೆನಾಡಿಗರ ಸಣ್ಣಸಣ್ಣ ವಿವರಗಳು, ಅವರ ಬದುಕು ಬವಣೆಗಳನ್ನು ನಾಗರಾಜ್ ಬರಹದಲ್ಲಿ ಬದುಕುತ್ತಾ ಹೋಗುತ್ತಾರೆ. ಹಾಗೆ ನನ್ನಂತಹವರೆಲ್ಲರೂ ಇವರ ಬರಹಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾ, ನಾವೆಲ್ಲಾ ನಡೆದ ಹಾಗೆ, ನೆಂದ ಹಾಗೆ ಭಾಸವಾಗುತ್ತದೆ.

ಮಲೆನಾಡಿನ ಭಾಷೆಯ ಅನನ್ಯತೆ ಓದುಗರಿಗೆ ರೋಮಾಂಚನ ಉಂಟು ಮಾಡುತ್ತದೆ. ತುಂಬಾ ಸರಳ ಸಹಜವಾದ ನುಡಿಗಟ್ಟುಗಳು ಕನ್ನಡ ಸಾಹಿತ್ಯಕ್ಕೆ ಮೆರಗನ್ನು ತಂದಿವೆ ಮತ್ತು ಅದರ ವಿಸ್ತಾರವನ್ನು ಈ ಬರಹಗಳಲ್ಲಿ ಕಾಣಬಹುದು. ಓದುಗರು ಈ ಲೇಖನಗಳನ್ನು ಓದುತ್ತಾ ಮುದಗೊಳ್ಳುತ್ತಾರೆ. ಸಹಜವಾಗಿ ಮಳೆಯನ್ನು ನೋಡಿದ ಹಾಗೆಯೇ ಮಳೆಯ ಕುರಿತು ಓದುವಾಗ ಕೂಡ ನಮ್ಮ ಮನಸ್ಸಿನ ಒಳಗೆ ಮಳೆ ಬರುತ್ತಲೇ ಇರುತ್ತದೆ, ಅಂತಹ ಒಂದು ಶಕ್ತಿಯನ್ನು ನಾಗರಾಜ್ ಓದುಗರಿಗೆ ಆಗುಮಾಡಿದ್ದಾರೆ.

ಇದಕ್ಕಾಗಿ ನಿಜಕ್ಕೂ ನಾನು ಅವರನ್ನು ಅಭಿನಂದಿಸಲೇ ಬೇಕು. ಇಲ್ಲಿ ಮಳೆ ಒಂದು ರೂಪಕ, ಒಂದು ವಾಸ್ತವ ಅಥವಾ ಇವರು ಹೇಳುವ ಹಾಗೆ ಮಾಯಾಂಗನೆ. ಇವರು ಮಳೆಯನ್ನು ಇಲ್ಲಿ ಮಾಯಾಂಗನೆ ಎಂದಿದ್ದಾರೆ. ಹಾಗೆ ಅವರು ಹೇಳುವಾಗ, ನನಗೆ ಮೊದಲ ಮಳೆಗೆ ಹದಿಹರೆಯದ ಹೆಣ್ಣುಮಗಳು ಆಸೆಯಿಂದ ನೆನೆದು ತನ್ನ ತಾಯಿಯ ಮುಂದೆ ಖುಷಿಯಾಗುವ ವರೆಗೂ ‘ನೆಂದೆ ಅಮ್ಮ’ ಅಂತ ಹೇಳಿ, ತಾಯಿಯಿಂದ ಬೈಸಿಕೊಳ್ಳುತ್ತಿರುವಾಗ, ಸ್ವತಃ ಆ ತಾಯಿ ತನ್ನ ವಯಸ್ಸಿನಲ್ಲಿ ತಾನು ಹೇಗೆ ಗದ್ದೆಯಿಂದಲೊ, ತೋಟದಿಂದಲೋ, ಇನ್ನೂ ಎಲ್ಲಿಂದಲೋ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಮಳೆಯಲ್ಲಿ ನೆಂದು ಸುಖ ಅನುಭವಿಸಿದ್ದನ್ನು ಹೇಳಿಕೊಳ್ಳದೆ ಒಳಗೇ ಸಂತಸ ಪಡುವ ದೃಶ್ಯ ಕಣ್ಮುಂದೆ ಬಂತು. ಮಳೆಯೆಂಬ ಮಾಯಾಂಗನೆ ವಾಸ್ತವಗಳನ್ನು ಬಿಚ್ಚಿಡುವ ಇಂತಹ ಅಪರೂಪದ ಕಥನಗಳು ಎನ್ನುವುದು ನನ್ನ ಭಾವನೆ.

ನಾಗರಾಜ್ ಶ್ರಮ ಸಂಸ್ಕೃತಿಯಿಂದ ಬಂದವರು, ಕೃಷಿಯ ಕಷ್ಟವನ್ನು, ಪ್ರಕೃತಿಯ ಸಂಪತ್ತಿನ ಸುಖವನ್ನು ಅನುಭವಿಸಿದವರು, ಇದು ಅಲ್ಲಿ ಹುಟ್ಟಿ ಬೆಳೆದವರೆಲ್ಲರ ಅನುಭವವೂ ಹೌದು. ಇವರು ಹಾಡ್ಲಹಳ್ಳಿಯೆಂಬ ಪುಟ್ಟ ಗೂಡಿನಿಂದ ಹಾರಿಬಂದ ಹಕ್ಕಿಯಂತೆ ಕಾಣಿಸುತ್ತಾರೆ. ತನ್ನ ವೃತ್ತಿಯ ಕಾರಣಕ್ಕೆ ಎಲ್ಲೆಲ್ಲೋ ತಿರುಗಾಡಿದರೂ, ಅವರ ನೆನಪುಗಳು ಮಾತ್ರ ತನ್ನ ಗೂಡಿನತ್ತಲೇ ಹಾರುತ್ತವೆ, ಇಲ್ಲಿ ಮಲೆನಾಡನ್ನು ಕಟ್ಟುವಾಗ ಕಣ್ಣು ಹಾಯಿಸಿದಷ್ಟೂ ಹಸಿರೇ ಚಲಿಸುತ್ತಿರುವಂತೆ ಕಾಣುತ್ತದೆ. ಅಲ್ಲಿಯ ಬೆಟ್ಟಗುಡ್ಡಗಳು, ಕಣಿವೆಗಳು, ಜಲಪಾತಗಳು, ಮನುಷ್ಯನಿಗೆ ಇದಕ್ಕಿಂತ ಶ್ರೀಮಂತಿಕೆ ಬೇಕಾ ಎನ್ನುವ ಖುಷಿ ಇದೆ. ಇದು ದೂರದಲ್ಲಿ ನಿಂತು ನೋಡಿದರೆ ಹಾಗನಿಸುತ್ತದೆ. ಆದರೆ ಕಣ್ಣು ಕೆಳಗೆ ಮಾಡಿ ನೋಡಿದರೆ ಪಾದದ ನೋವೆಷ್ಟು ಎಂದು ತಿಳಿಯುತ್ತದೆ. ನಾಗರಾಜ್ ಪಾದಕ್ಕೆ ಆದ ನೋವನ್ನು ಹೇಳುತ್ತಲೇ ಕಣ್ಣಿಗೆ ಕಂಡ ಹಸಿರು ಖುಷಿಯನ್ನು ಹೇಳಿದ್ದಾರೆ. ಇದು ಇವ ಕೃತಿಯ ಬಹಳ ದೊಡ್ಡ ಹೆಗ್ಗಳಿಕೆ.

ಕೃತಿಯ ಬಗ್ಗೆ ನಾನೊಬ್ಬ ಓದುಗನಾಗಿ ಹೇಳುವುದಾದರೆ ಈ ಕೃತಿಯಲ್ಲಿ ಒಂದು ಆಕಸ್ಮಿಕ ಸಾವು, ಜೀವ ಉಳಿಸಿದ ತಾಯಿ, ಹೆಣ್ಣು ಮಕ್ಕಳು ನೋಡುವ ರೋಮಾಂಚನ, ಮಗ ಬರದಿದ್ದಾಗ ತಲ್ಲಣ, ಒಂದು ಕೃತಿ, ಓದುಗ ಮತ್ತು ಲೇಖಕರ ನಡುವೆ ಮಳೆ ಸುರಿಯುವ ಸೇತುವೆಯಾಗಿ ಒಳಗೊಳ್ಳುವುದರಲ್ಲಿ ಆ ಕೃತಿಯ ಯಶಸ್ಸು ಇದೆ ಅನ್ನವುದನ್ನು ನಾಗರಾಜ್ ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ. ಅದು ಅವರ ಬರವಣಿಗೆಯ ಬಹಳ ದೊಡ್ಡ ಕೊಡುಗೆ ಎಂಬುದು ನನ್ನ ನಂಬಿಕೆ.

ಆಕಾಶಕ್ಕೂ, ಮೋಡಕ್ಕೂ, ಮಳೆಗೂ ಭೂಮಿಯೊಂದಿಗೆ ಇರುವಂತೆ ಅನಾದಿ ಕಾಲದಿಂದಲೂ ಮಳೆಹನಿಗೂ ಕಣ್ಣೀರಿಗೂ ನೇರ ಸಂಬಂಧವಿದೆ. ಈ ಎರಡು ಹನಿಗಳನ್ನು ನಾಗರಾಜ್ ತಮ್ಮ ಲೇಖನಗಳಲ್ಲಿ ವರವಿನಂತೆ ಬಳಸಿದ್ದಾರೆ ಅಥವಾ ಅದು ಮನುಷ್ಯನಾಳದ ದುಃಖದ ಸ್ಥಾಯಿಯಾಗಿ ಅಭಿವ್ಯಕ್ತಗೊಂಡಿದೆ. ವರವು ಎಂದರೆ ಹೆಚ್ಚು ಮಳೆಯಾದ ಕಡೆ ಭೂಮಿ ನೀರೇ ಸಹಜವಾಗಿ ಉಕ್ಕುತ್ತದೆ. ಇದನ್ನು ಅವರು ಲೇಖನಗಳಲ್ಲಿಯೂ ಬಳಸಿದ್ದಾರೆ. ಅದು ನಾನು ಈ ಲೇಖನಗಳನ್ನು ಓದುವಾಗ ಆ ವರವು ಎನ್ನುವ ನೆನಪುಗಳು ನನ್ನನ್ನು ಕಾಡಿದವು.

ಆ ನೀರು ಎಲ್ಲಿ ಉಕ್ಕುತ್ತದೆ ಎನ್ನುವುದು ತಿಳಿಯುವುದಿಲ್ಲ. ಬಹುಶಃ ಕೊಡಗಿನಲ್ಲಿ ಕಾವೇರಿ ಉದ್ಭವ ಆಂತ ಹೇಳ್ತಾರಲ್ಲಾ ಅಂತದ್ದೆಲ್ಲಾ ಮಲೆನಾಡಿನಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆ ನಮಗೆ ಕಾಣಿಸುತ್ತವೆ. ಹಾಗೆ ಮಳೆಯ ಬಗ್ಗೆ ಬರೆಯುವಾಗ ತಮ್ಮ ಖಾಸಗಿ ಬದುಕನ್ನು ಈ ವರವು ಉಕ್ಕುತ್ತದಲ್ಲ ಹಾಗೆ ತನ್ನ ಬರವಣಿಗೆಯಲ್ಲೇ ತಲ್ಲೀನರಾಗಿ ಬರೆದ ಈ ಲೇಖನಗಳು ತೋಯಿಸುತ್ತಲೇ ಇರುತ್ತವೆ. ಇದರಲ್ಲಿ ಇರುವ 13 ಲೇಖನಗಳು ಓದುಗರಿಗೆ ಖಂಡಿತಾ ಇಷ್ಟವಾಗುತ್ತವೆ.

share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X