ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಮೃತ್ಯು: ಫಲ ನೀಡದ 16 ಗಂಟೆಗಳ ರಕ್ಷಣಾಕಾರ್ಯ

ಸಾಂದರ್ಭಿಕ ಚಿತ್ರ
ಉಮಾರಿಯಾ: ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಆಯತಪ್ಪಿ 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ.
16 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಬಾಲಕನನ್ನು ಕೊಳವೆ ಬಾವಿಯಿಂದ ಮೇಲಕ್ಕೆತ್ತಲಾಗಿತ್ತು. ಆದರೆ, ಬಾಲಕ ಅದಾಗಲೇ ಕೊನೆಯುಸಿರು ಎಳೆದಿದ್ದ ಎಂದು ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿರುವುದಾಗಿ NDTV.com ವರದಿ ಮಾಡಿದೆ.
ಉಮಾರಿಯಾ ಜಿಲ್ಲೆಯ ಬಾದ್ಚದ್ನ ಗೌರವ್ ದುಬೆ ಮೃತಪಟ್ಟ ಬಾಲಕ. ಬೆಳಗಿನ ಜಾವ 4 ರವರೆಗೆ ನಿರಂತರ 16 ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಯಿತು ಎಂದು ವರದಿಯಾಗಿದೆ.
Umaria, Madhya Pradesh | A four-year-old boy fell into a borewell on Thursday. NDRF & SDRF teams rushed to the scene. Rescue mission was launched without further delay: Umaria Collector Sanjeev Srivastava (24.02) pic.twitter.com/XeUlxrOlUO
— ANI (@ANI) February 25, 2022
Next Story







