ಗೃಹ ಸಚಿವರು ‘ಗೃಹ'ದಲ್ಲೇ ಕುಳಿತುಕೊಳ್ಳುವುದು ಒಳಿತು: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಫೆ. 25: ‘ಗೃಹಸಚಿವರ ಮಾತುಗಳನ್ನು ಕೇಳಿ ನಗಬೇಕೋ, ಅಳಬೇಕೋ ತಿಳಿಯದಾಗಿದೆ! ಮೂರು ವರ್ಷಗಳಿಂದ ಇವರದ್ದೇ ಸರಕಾರವಿದೆ, ಈಗ ಇವರೇ ಗೃಹಸಚಿವರು, ಹೀಗಿದ್ದೂ ತಮ್ಮ ಇಲಾಖೆಯನ್ನ ದೂಷಿಸುವ ಮೂಲಕ ತಾವೇ ಅಸಮರ್ಥರೆಂದು ತೋರಿಸುತ್ತಿದ್ದಾರೆ. ತಮ್ಮದೇ ಇಲಾಖೆಯಲ್ಲಿ, ತಮ್ಮದೇ ಜಿಲ್ಲೆಯಲ್ಲಿ ಹಿಡಿತವಿಲ್ಲದಿದ್ದರೆ ‘ಗೃಹ'ದಲ್ಲೇ ಕುಳಿತಿರುವುದು ಒಳಿತು!' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೆಲ ದಿನಗಳ ಹಿಂದೆ ತಮ್ಮದೇ ಪೊಲೀಸರ ಬಗ್ಗೆ ‘ಎಂಜಲು ಕಾಸು ತಿನ್ನುತ್ತಿದ್ದಾರೆ' ಎಂದು ಆರೋಪಿಸಿದ್ದರು, ಈಗ ಪೊಲೀಸರು ಆರೋಪಿಗಳನ್ನು ಸಾಕುತ್ತಿದ್ದಾರೆ ಎಂದಿದ್ದಾರೆ. ಹಾಗಾದರೆ ಇವರ ಸರಕಾರ ಇಷ್ಟು ವರ್ಷ ಮಾಡಿದ್ದೇನು? ಗೃಹ ಸಚಿವರಿಗೇ ಪೊಲೀಸರ ಮೇಲೆ ನಂಬಿಕೆ ಇಲ್ಲದ ಮೇಲೆ ಜನಸಾಮಾನ್ಯರು ನಂಬುವುದು ಹೇಗೆ? ಜನರಿಗೆ ರಕ್ಷಣೆ ಸಿಗುವುದೇ?' ಎಂದು ಪ್ರಶ್ನಿಸಿದ್ದಾರೆ.
‘ಆರಗ ಜ್ಞಾನೇಂದ್ರ ಅವರೇ, ಪೊಲೀಸರೇ ಕ್ರಿಮಿನಲ್‍ಗಳನ್ನ ಸಾಕುತ್ತಿದ್ದಾರೆ ಎಂದು ತಾವು ಹೇಳಿದ್ದು ಈ ದೃಶ್ಯಗಳಲ್ಲಿ ಕಾಣುತ್ತಿದೆ, ಇದಕ್ಕಾಗಿಯೇ ತಾವು ಹೇಳಿದ್ದೇ? ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಮ್ಮ ಪೊಲೀಸರು ದಕ್ಷರಿದ್ದಾರೆ, ಆದರೆ ಅವರ ಕೈಗಳನ್ನು ಕಟ್ಟಿ ಹಾಕಿ ಕ್ರಿಮಿನಲ್‍ಗಳನ್ನ ಸಾಕುತ್ತಿರುವುದು ನಿಮ್ಮ ಸರಕಾರ ಅಲ್ಲವೇ?' ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹಸಚಿವರ ಮಾತುಗಳನ್ನು ಕೇಳಿ ನಗಬೇಕೋ, ಅಳಬೇಕೋ ತಿಳಿಯದಾಗಿದೆ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 25, 2022
3 ವರ್ಷಗಳಿಂದ ಇವರದ್ದೇ ಸರ್ಕಾರವಿದೆ, ಈಗ ಇವರೇ ಗೃಹಸಚಿವರು, ಹೀಗಿದ್ದೂ ತಮ್ಮ ಇಲಾಖೆಯನ್ನ ದೂಷಿಸುವ ಮೂಲಕ ತಾವೇ ಅಸಮರ್ಥರೆಂದು ತೋರಿಸುತ್ತಿದ್ದಾರೆ.
ತಮ್ಮದೇ ಇಲಾಖೆಯಲ್ಲಿ, ತಮ್ಮದೇ ಜಿಲ್ಲೆಯಲ್ಲಿ ಹಿಡಿತವಿಲ್ಲದಿದ್ದರೆ 'ಗೃಹ'ದಲ್ಲೇ ಕುಳಿತಿರುವುದು ಒಳಿತು!
1/3 pic.twitter.com/3wsNHddQyT







