ಪ್ರೊ ಕಬಡ್ಡಿ ಲೀಗ್: ದಿಲ್ಲಿ ದಬಾಂಗ್ ಚಾಂಪಿಯನ್
3 ಬಾರಿಯ ಚಾಂಪಿಯನ್ ಪಾಟ್ನಾ ವಿರುದ್ಧ ರೋಚಕ ಜಯ

Photo:twitter
ಬೆಂಗಳೂರು, ಫೆ.25: ಆರಂಭದಿಂದ ಅಂತ್ಯದ ತನಕ ತೀವ್ರ ಪೈಪೋಟಿಯಿಂದ ಕೂಡಿದ್ದ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಫೈನಲ್ನಲ್ಲಿ ದಿಲ್ಲಿ ದಬಾಂಗ್ ತಂಡ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೆಟ್ಸ್ ತಂಡವನ್ನು ಕೇವಲ 1 ಅಂಕಗಳ ಅಂತರ(37-36)ದಿಂದ ಮಣಿಸಿ ಮೊದಲ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಶುಕ್ರವಾರ ನಡೆದ ಫೈನಲ್ನ ಮೊದಲಾರ್ಧದದ ಅಂತ್ಯಕ್ಕೆ ಪಾಟ್ನಾ 17-15 ಮುನ್ನಡೆಯಲ್ಲಿತ್ತು. ದ್ವಿತೀರ್ಯಾದದಲ್ಲಿ ತಿರುಗಿ ಬಿದ್ದ ದಬಾಂಗ್ ತಂಡ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ದಿಲ್ಲಿ ಪರವಾಗಿ ವಿಜಯ್ ಮಲಿಕ್(14 ಅಂಕ)ಹಾಗೂ ನವೀನ್ ಕುಮಾರ್(13)ಸೂಪರ್-10 ಗಳಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು. ಪಾಟ್ನಾ ಪರ ಸಚಿನ್ 10, ಗುಮಾನ್ ಸಿಂಗ್ 9 ಅಂಕ ಗಳಿಸಿದರು.
ಸೆಮಿ ಫೈನಲ್ನಲ್ಲಿ ಯುಪಿ ಯೋಧಾ ತಂಡವನ್ನು ಸೋಲಿಸಿದ್ದ ಪಾಟ್ನಾ ಫೈನಲ್ಗೆ ತಲುಪಿದರೆ, ದಿಲ್ಲಿ ದಬಾಂಗ್ ಮತ್ತೊಂದು ಸೆಮಿ ಫೈನಲ್ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿ ಸತತ 2ನೇ ಬಾರಿ ಫೈನಲ್ಗೆ ತಲುಪಿತ್ತು.
Next Story