ಬಂಟ್ವಾಳ: ನೀರಿನಲ್ಲಿ ಮುಳುಗಿ ಬಾಲಕ ಸಹಿತ ಇಬ್ಬರು ಮೃತ್ಯು

ಬಂಟ್ವಾಳ: ಕಲ್ಲಿನ ಕೋರೆಯ ಗುಂಡಿಗೆ ಇಳಿದ ಬಾಲಕ ಸಹಿತ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ನರಿಕೊಂಬು ಗ್ರಾಮದ ಏಲಬೆ ಎಂಬಲ್ಲಿ ಶುಕ್ರವಾರ ನಡೆದಿದೆ.
ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಬೋರುಗುಡ್ಡೆ ನಿವಾಸಿ ಜಗದೀಶ್ (45) ಮತ್ತು ಅಲ್ಲಿಪಾದೆ ನಿವಾಸಿ ನಿದೀಶ್ (16) ಮೃತಪಟ್ಟವರು.
ಬಿ.ಸಿ.ರೋಡ್ ಸಮೀಪದ ಗೂಡಿನಬಳಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾದ ನಿದೀಶ್ ಅಲ್ಲಿಪಾದೆ ನಿವಾಸಿಯಾಗಿದ್ದು ನರಿಕೊಂಬು ಗ್ರಾಮದಲ್ಲಿರುವ ಅಕ್ಕನ ಮನೆಗೆ ತೆರಳಿದ್ದ ಎನ್ನಲಾಗಿದೆ.
ಸಂಜೆ ವೇಳೆ ಈ ಇಬ್ಬರು ಸ್ನಾನ ಮಾಡಲೆಂದು ಕಲ್ಲಿನ ಕೋರೆಯ ಗುಂಡಿಯಲ್ಲಿ ತುಂಬಿರುವ ನೀರಿಗೆ ಇಳಿದಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಇಲ್ಲಿ ಅಕ್ರಮವಾಗಿ ಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡದೆ ಮೃತದೇಹವನ್ನು ಸಾಗಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ, ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದಾರೆ.