ಬೆಳ್ತಂಗಡಿ: ದಲಿತ ಯುವಕನ ಹತ್ಯೆ ಪ್ರಕರಣ; ಎಸ್ ಡಿ ಪಿ ಐ ಖಂಡನೆ
ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳದ ಕನ್ಯಾಡಿ ಎಂಬಲ್ಲಿ ಕ್ಷುಲ್ಲಕ ವಿಷಯಕ್ಕೆ ಬಜರಂಗದಳದ ಕಾರ್ಯಕರ್ತ ಕೃಷ್ಣ ಡಿ ಎಂಬಾತ ದಲಿತ ಯುವಕನನ್ನು ಅಮಾನುಷವಾಗಿ ಹತ್ಯೆ ನಡೆಸಿರುವ ಘಟನೆಯನ್ನು ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಸಮಿತಿ ಅಧ್ಯಕ್ಷ ನಿಸಾರ್ ಕುದ್ರಡ್ಕ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯದಲ್ಲಿ ಹಿಂದುತ್ವ ಶಕ್ತಿಗಳಿಂದ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ದೌರ್ಜನ್ಯ ದಿನ ನಿತ್ಯ ಹೆಚ್ಚುತ್ತಲೆ ಇದೆ. ರಾಜ್ಯ ಬಿಜೆಪಿ ಸರಕಾರ ಆರೋಪಿಗಳಿಗೆ ರಕ್ಷಣೆ ನೀಡುತ್ತಿರುದೆ ಇದಕೆಲ್ಲಾ ಕಾರಣ. ಕನ್ಯಾಡಿಯಲ್ಲಿ ದಲಿತ ಯುವಕನನ್ನು ಹತ್ಯೆ ನಡೆಸಿದ ಆರೋಪಿಯನ್ನು ಮತ್ತು ಆತನಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪಿಯ ಸಹೋದರ ಬಜರಂಗದಳದ ಮುಖಂಡ ಭಾಸ್ಕರ್ ಧರ್ಮಸ್ಥಳ ನನ್ನು ತಕ್ಷಣ ಬಂಧಿಸಬೇಕು. ಇಲ್ಲದಿದ್ದರೆ ತಾಲೂಕಿನಾದ್ಯಂತ ಹೋರಾಟ ನಡೆಸಲಾಗುದು ಎಂದು ನಿಸಾರ್ ಕುದ್ರಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story