ಮಂಗಳೂರು ಪೈಪ್ ಇಂಡಸ್ಟ್ರೀಸ್‌ನಿಂದ ರೈನ್ ಹಾರ್ವೆಸ್ಟಿಂಗ್ ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಫೆ.25: ಕೊಣಾಜೆ ಮತ್ತು ಮುಡಿಪು ಸಮೀಪದಲ್ಲಿರುವ ಮಂಗಳೂರು ಪೈಪ್ ಇಂಡಸ್ಟ್ರೀಸ್ ರೈನ್ ಹಾರ್ವೆಸ್ಟಿಂಗ್ ಪದ್ಧತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅಲ್ಪಅವಧಿಯಲ್ಲೇ ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕಳೆದ 22 ವರ್ಷಗಳಿಂದ ಅತ್ಯುತ್ತಮ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ಮಂಗಳೂರು ಪೈಪ್ ಇಂಡಸ್ಟ್ರೀಸ್ ಇದೇ ಮೊದಲ ಬಾರಿಗೆ ದಕ್ಷಿಣ ಕರ್ನಾಟಕದಲ್ಲೇ ರೈನ್ ಹಾರ್ವೆಸ್ಟಿಂಗ್‌ನ್ನು ಪರಿಚಯಿಸಿದೆ. ಮಂಗಳೂರು ಪೈಪ್ ಇಂಡಸ್ಟ್ರೀಸ್‌ನ ಉತ್ಪಾದನೆಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿದೆ. ಉತ್ತಮ ನೀರು ನಿರ್ವಹಣೆಗೂ ಹೆಸರುವಾಸಿಯಾಗಿದೆ. ಐಎಸ್‌ಐ ಗುಣಮಟ್ಟದ ರಿಜಿಡ್ ಪಿವಿಸಿ ಪೈಪ್‌ಗಳ ಉತ್ಪನ್ನವು ಕರ್ನಾಟಕವಲ್ಲದೆ ಕಾಸರಗೋಡು ಜಿಲ್ಲೆಯಲ್ಲೂ ಮನೆ ಮಾತಾಗಿವೆ. ಸರಕಾರಿ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ, ಕೃಷಿ ಚಟುವಟಿಕೆ ಮತ್ತು ಗೃಹ ಉಪಯೋಗಿ ಪೈಪುಗಳನ್ನು ಉತ್ಪಾದಿಸುವ ಮಂಗಳೂರು ಪೈಪ್ ಇಂಡಸ್ಟ್ರೀಸ್‌ನಲ್ಲಿ ಫ್ಲಂಬಿಂಗ್ ಪೈಪ್ಸ್, ಕನ್ಡ್ಯುಟ್ ಪೈಪ್ಸ್, ಡ್ರೈನೇಜ್ ಪೈಪ್ಸ್ ಹಾಗೂ ರೈನ್ ಹಾರ್ವೆಸ್ಟಿಂಗ್ ಸಿಸ್ಟಮ್ಗೆ ಸಂಬಂಧಿಸಿದಂತೆ ಉತ್ಕೃಷ್ಟ ಗುಣಮಟ್ಟದ ಪೈಪ್‌ಗಳನ್ನೂ ಕೂಡ ತಯಾರಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.