ಟ್ಯಾಲೆಂಟ್‌ನಿಂದ ವಕ್ಫ್ ಇಲಾಖೆಗೆ ಸಂಬಂಧಿತ ಕಾನೂನು ಮಾಹಿತಿ ಕಾರ್ಯಾಗಾರ

ಮಂಗಳೂರು, ಫೆ.25: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಆಶ್ರಯದಲ್ಲಿ ವಕ್ಫ್ ಇಲಾಖೆಗೆ ಸಂಬಂಧಪಟ್ಟ ಕಾನೂನು ಮಾಹಿತಿ, ಮಾರ್ಗದರ್ಶನ ಕಾರ್ಯಾಗಾರವು ಟ್ಯಾಲೆಂಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ಜರುಗಿತು.
ರಾಜ್ಯಸಭಾ ಸದಸ್ಯ ಮಾಜಿ ಬಿ.ಇಬ್ರಾಹೀಂ ಕಾರ್ಯಾಗಾರವನ್ನು ಉದ್ಘಾಟಿಸಿದರು.
ನೋಟರಿ ಬಿ.ಎ.ಮುಹಮ್ಮದ್ ಹನೀಫ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ, ದೇಶದಲ್ಲಿ ಒಟ್ಟು 4 ಲಕ್ಷ ಎಕರೆ ಜಮೀನು ವಕ್ಫ್‌ಗೆ ಇದೆ. ರೈಲ್ವೆ ಮತ್ತು ರಕ್ಷಣಾ ಇಲಾಖೆ ಬಿಟ್ಟರೆ ಅತೀ ಹೆಚ್ಚು ಆಸ್ತಿ ಹೊಂದಿರುವುದು ವಕ್ಫ್ ಇಲಾಖೆಯಾಗಿದೆ. ಆದರೆ ಮುಸ್ಲಿಮ್ ಸಮುದಾಯದ ಶ್ರೇಯೋಭಿವೃದ್ಧಿಗೆ ಸದ್ಬಳಕೆಯಾಗಬೇಕಾಗಿರುವ ವಕ್ಫ್ ಆಸ್ತಿ ದುರ್ಬಳಕೆಯಾಗುತ್ತಿದೆ. ಆದ್ದರಿಂದ ವಕ್ಫ್ ಸೊತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅದರಿಂದ ಬರುವ ವರಮಾನವನ್ನು ಸಮುದಾಯದ ಸರ್ವಾಂಗೀಣ ಪ್ರಗತಿಗೆ ಬಳಸುವಂತಾಗಬೇಕು ಎಂದರು
ಮುಖ್ತಾರ್ ಅಹ್ಮದ್, ಅಬ್ದುರ್ರಝಾಕ್ ಸರ್ಮದ್, ಸರ್ಫ್‌ರಾಝ್, ನೌಫಲ್, ಜೀಶನ್ ಅಲಿ, ಅನ್ಸಾರ್, ಶೇಖ್ ಇಸಾಕ್, ಆಯಿಶ, ಅಸ್ಗರ್ ಮುಡಿಪು ಮುಂತಾದ ವಕೀಲರು ವಕ್ಫ್ ಇಲಾಖೆಯ ಕಾನೂನು ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ತಾಲೂಕಿನ ಹಲವಾರು ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದರು.
ಅಬ್ದುಲ್ ಖಾದರ್ ಸಅದಿ ದುಆಗೈದರು. ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಬಡಿಲ, ನಕಾಶ್ ಬಾಂಬಿಲ, ಅಬ್ದುಲ್ ಮಜೀದ್ ಸಹಕರಿಸಿದರು.