ದ್ವಿತೀಯ ಟ್ವೆಂಟಿ-20: ಭಾರತಕ್ಕೆ 184 ರನ್ ಗುರಿ ನೀಡಿದ ಶ್ರೀಲಂಕಾ
ನಿಶಾಂಕ ಅರ್ಧಶತಕ

Photo:BCCI
ಧರ್ಮಶಾಲಾ, ಫೆ.26: ಆರಂಭಿಕ ಬ್ಯಾಟರ್ ಪಥುಮ್ ನಿಶಾಂಕ ಗಳಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ಭಾರತಕ್ಕೆ 2ನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದ ಗೆಲುವಿಗೆ 184 ರನ್ ಗುರಿ ನಿಗದಿಪಡಿಸಿದೆ.
ಶನಿವಾರ ಟಾಸ್ ಜಯಿಸಿದ ಭಾರತವು ಶ್ರೀಲಂಕಾವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು. ಲಂಕಾವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 183 ರನ್ ಗಳಿಸಿತು. ನಿಶಾಂಕ್(75, 53 ಎಸೆತ, 11 ಬೌಂಡರಿ)ಹಾಗೂ ನಾಯಕ ದಸುನ್ ಶನಕ(ಔಟಾಗದೆ 47, 19 ಎಸೆತ, 2 ಬೌಂ, 5 ಸಿಕ್ಸರ್)ತಂಡವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.
ನಿಶಾಂಕ್ ಹಾಗೂ ದನುಷ್ಕ ಗುಣತಿಲಕ(38 ರನ್, 29 ಎಸೆತ, 4 ಬೌಂ., 2 ಸಿ.)ಮೊದಲ ವಿಕೆಟಿಗೆ 67 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಈ ಇಬ್ಬರು ಔಟಾದ ಬಳಿಕ ಚರಿತ ಅಸಲಂಕ(2)ಕಮಿಲ್ ಮಿಶರ(1), ದಿನೇಶ್ ಚಾಂಡಿಮಲ್(9)ಬೆನ್ನುಬೆನ್ನಿಗೆ ಔಟಾದರು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್, ಭುವನೇಶ್ವರ ಕುಮಾರ್, ರವೀಂದ್ರ ಜಡೇಜ ಹಾಗೂ ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.