ಗುರುಪುರ: ಅಂಗಡಿಗೆ ಅಪ್ಪಳಿಸಿ ಪಲ್ಟಿಯಾದ ಕಾರು

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ಗುರುಪುರ ಅಲೈಗುಡ್ಡೆಯಲ್ಲಿ ಕಾರೊಂದು ನಿಯಂತ್ರಣ ತಪ್ಪಿರಸ್ತೆ ಮೇಲೇರಿ ಅಂಗಡಿಗೆ ಅಪ್ಪಳಿಸಿ ಬಳಿಕ ಪಲ್ಟಿ ಹೊಡೆದ ಶನಿವಾರ ಮಧ್ಯಾಹ್ನ ನಡೆದಿದೆ.
ವಾಮಂಜೂರಿನ ಹೋಟೆಲ್‌ವೊಂದರ ಮಾಲಕ ವೀರಣ್ಣ ಗುರುಪುರ ಕೈಕಂಬದತ್ತ ಚಲಾಯಿಸುತ್ತಿದ್ದ ಕಾರು ಅಲೈಗುಡ್ಡೆಯಲ್ಲಿ ಶಟರ್ ಹಾಕಿದ ಅಂಗಡಿಗೆ ಅಪ್ಪಳಿಸಿತು ಎನ್ನಲಾಗಿದೆ. ಬಳಿಕ ಕಾರು ಬಳಿಕ ಪಲ್ಟಿ ಹೊಡೆದಿದೆ. ಇದರಿಂದ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಅಂಗಡಿಯೊಳಗಿನ ಕಪಾಟು ನುಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.
Next Story