ಮಂಗಳೂರಿನ ಹಾಫಿಝ್ ಅಹ್ಮದ್ ಸಈದ್ ಗೆ ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ

ಮಂಗಳೂರು: ಗುಜರಾತಿನ ರಾಜಕೋಟ್‌ನಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಂಗಳೂರು ತಾಲೂಕಿನ ಹಾಫಿಝ್ ಅಹ್ಮದ್ ಸಈದ್ ಪ್ರಶಸ್ತಿ ಗಳಿಸಿದ್ದಾರೆ.
ಸೀನಿಯರ್ ವಿಭಾಗದ ಕ್ವಿಝ್ ಹಾಗೂ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿರುವ ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಅವರು ಕೆ.ಎಂ. ಸಿದ್ದೀಖ್-ಫಾತಿಮಾ ಸುಮಯ್ಯಾ ದಂಪತಿಯ ಪುತ್ರ.
ಹಾಫಿಝ್ ಅಹ್ಮದ್ ಸಈದ್ ಎಸ್ಸೆಸ್ಸೆಫ್ ಕಿನ್ಯ ಮೀಂಪ್ರಿ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
Next Story