ಉಳ್ಳಾಲ ಉರೂಸ್: ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಉಳ್ಳಾಲ: ಭಾರತ ಬಹುತ್ವದದಿಂದ ಕೂಡಿದ ದೇಶ. ಎಲ್ಲಾ ಜಾತಿ ಧರ್ಮದವರು ಇಲ್ಲಿದ್ದಾರೆ. ಆದರೆ, ನಾವು ಭಾರತೀಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಶನಿವಾರ ದರ್ಗಾಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಎಲ್ಲಾ ಧರ್ಮಗಳು ಕೂಡ ಸಮಾನ ಹಾಗೂ ಸಮಾನ ಗೌರವ ಇದೆ ಎಂದು ಹೇಳಿದ್ದಾರೆ. ಪರಧರ್ಮ ಸಹಿಷ್ಣುತೆಗೆ ವಿರುದ್ಧ ಆಗಿರುವವರು ಸಂವಿಧಾನಕ್ಕೆ ವಿರುದ್ಧ ಆಗಿದ್ದಾರೆ ಎಂದರೂ ತಪ್ಪಿಲ್ಲ. ಧರ್ಮ, ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಇದು ಮಾನವ ಸಮಾಜದ ಲಕ್ಷಣ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಉಸ್ಮಾನ್ ಫೈಝಿ ತೋಡಾರ್ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಮೊಯ್ದಿನ್ ಬಾವಾ, ಮಾಜಿ ಶಾಸಕ ಜೆ.ಆರ್.ಲೋಬೋ, ನಿಖಿತ್ ಮೌರ್ಯ, ಜಿ.ಎ. ಬಾವಾ, ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಟಿ.ಕೆ.ಸುಧೀರ್, ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಉಪಾಧ್ಯಕ್ಷ ಮೋನು, ಎ.ಕೆ.ಮೊಯ್ದಿನ್, ಮುಸ್ತಫಾ ಅಬ್ದುಲ್ಲಾ, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಆಸೀಫ್ ಅಬ್ದುಲ್ಲಾ, ಯೂಸುಫ್ ಉಳ್ಳಾಲ, ಅಬ್ಬಾಸ್ ಹಾಜಿ ಕೆನರಾ, ಪ್ರತಿಭಾ ಕುಳಾಯಿ, ಎಂ.ಎಸ್.ಮುಹಮ್ಮದ್, ಸದಾಶಿವ ಉಳ್ಳಾಲ್, ಎನ್.ಎಸ್.ಕರೀಂ, ಶಾಹುಲ್ ಹಮೀದ್, ತಾಪಂ ಮಾಜಿ ಅಧ್ಯಕ್ಷ ಮೋನು ಮಲಾರ್, ನಗರಸಭೆ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಯು.ಬಿ.ಸಲೀಂ, ಕವಿತಾ ಸನಿಲ್, ಯು.ಕೆ.ಮೋನು, ರಮಾನಾಥ ಪೂಜಾರಿ, ನಝೀರ್ ಮಠ, ಸದಕತುಲ್ಲಾ ಕೋಟೆಪುರ, ನಾಸೀರ್ ಸಾಮಣಿಗೆ ಮತ್ತಿತರರು ಉಪಸ್ಥಿತರಿದ್ದರು.