ಹರ್ಷ ಕುಟುಂಬಕ್ಕೆ ಈಶ್ವರಪ್ಪ ಟಿಕೆಟ್ ಬಿಟ್ಟು ಕೊಡಲಿ, ಕಾಂಗ್ರೆಸ್ ಅಭ್ಯರ್ಥಿಯನ್ನೇ ಹಾಕಲ್ಲ ಎಂದ ಬಿ.ಕೆ ಹರಿಪ್ರಸಾದ್

ಶಿವಮೊಗ್ಗ, ಫೆ.25: ಕಳೆದ ರವಿವಾರ ಶಿವಮೊಗ್ಗ ನಗರದ ಭಾರತಿ ಕಾಲನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟಂಬಕ್ಕೆ ಮುಂದಿನ ವಿಧಾನ ಸಭೆಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಗ್ರಹ ಕೇಳಿ ಬಂದಿರುವ ಬೆನ್ನಲ್ಲೇ ಇದೀಗ ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು 'ಪ್ರತಿಧ್ವನಿ' ವೆಬ್ ಸೈಟ್ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
'ಹರ್ಷನ ಹತ್ಯೆ ಘಟನೆ ಬಳಿಕ ಅವರ ಸಹೋದರಿ ಅಷ್ಟೊಂದು ಚೆನ್ನಾಗಿ ಮಾನವೀಯತೆಯ ದೃಷ್ಟಿಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಹರ್ಷನ ಕುರಿತು ಮಾತನಾಡುವ ಸಚಿವ ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಟಿಕೆಟ್ ಅನ್ನು ಹಿಂದುತ್ವಕ್ಕೆ ಪ್ರಾಣ ಬಿಟ್ಟಿರುವ ಹರ್ಷನ ಕುಟುಂಬಕ್ಕೆ ಬಿಟ್ಟು ಕೊಡಲಿ ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕುವುದಿಲ್ಲ. ಇದು ಸಚಿವ ಈಶ್ವರಪ್ಪಗೆ ನನ್ನ ಸವಾಲು' ಎಂದು ಹೇಳಿದ್ದಾರೆ.
Next Story





