ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನಿಂದ ಮನವಿ

ಮಂಗಳೂರು, ಫೆ.26: ಹಿಜಾಬ್ ವಿವಾದದಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರಗಿಸಬೇಕು ಮತ್ತು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಎಸ್‌ಎಂಎ)ನ ದ.ಕಜಿಲ್ಲಾ ವೆಸ್ಟ್ ವತಿಯಿಂದ ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಎಸ್‌ಎಂಎ ಜಿಲ್ಲಾ ಉಪಾಧ್ಯಕ್ಷ ಮೂಸ ಹಾಜಿ ಸಾಂಬರತೋಟ, ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರು, ಕೋಶಾಧಿಕಾರಿ ಬಶೀರ್ ಅಹ್ಮದ್ ಪಂಜಿಮೊಗರು, ಕಾರ್ಯದರ್ಶಿ ಇಸ್ಮಾಯಿಲ್ ಕಿನ್ಯ, ರಾಜ್ಯ ನಾಯಕರಾದ ಇಕ್ಬಾಲ್ ಸುರತ್ಕಲ್, ಜಿಲ್ಲಾ ನಾಯಕರಾದ ರಫೀಕ್ ಝುಹ್ರಿ ಮಂಚಿ, ಸತ್ತಾರ್ ಸಖಾಫಿ ಅಡ್ಯಾರ್ ಪದವು ಉಪಸ್ಥಿತರಿದ್ದರು.
Next Story





