ಮಂಗಳೂರು: ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ 'ಪರಂಪ್ರತೀಕ' ಕಲಾ ಉತ್ಸವ ಉದ್ಘಾಟನೆ

ಮಂಗಳೂರು, ಫೆ.26: ನಗರದ ಪ್ರಸಾದ್ ಆರ್ಟ್ ಗ್ಯಾಲರಿಯು 27 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾದ ಱಪರಂಪ್ರತೀಕ’ ವಿಶಿಷ್ಟ ಕಲಾ ಉತ್ಸವವನ್ನು ಆಳ್ವಾಸ್ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಶನಿವಾರ ಉದ್ಘಾಟಿಸಿದರು.
ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಬೋಧಿ ಕಾಲೇಜ್ ಆಫ್ ಸೋಶಿಯಲ್ ಆರ್ಟ್‌ನ ನಿರ್ದೇಶಕ ಶಿವಾನಂದ ಬಸವಂತಪ್ಪಅತಿಥಿಗಳಾಗಿದ್ದರು.
ರೇಖಾ ಆಳ್ವ ಸ್ವಾಗತಿಸಿದರು. ಶರತ್ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಿಯಾ ಆಳ್ವ ವಂದಿಸಿದರು. ವೀಣಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಕೊಡಿಯಾಲಗುತ್ತು ಪೂರ್ವ ರಸ್ತೆಯಲ್ಲಿರುವ ’ರಾಮ್ ಪ್ರಸಾದ್’ ನಲ್ಲಿರುವ ಗ್ಯಾಲರಿ ಸಂಸ್ಥಾಪಕ ಕೋಟಿ ಪ್ರಸಾದ್ ಆಳ್ವ ಅವರ ವಿಶಾಲವಾದ ವಸತಿ ಆವರಣದಲ್ಲಿ ಬೆಳಗ್ಗೆ 9:30ರಿಂದ ರಾತ್ರಿ 7:30ರವರೆಗೆ ನಡೆಯುವ ಈ ಉತ್ಸವವು ಫೆ.28ರವರೆಗೆ ನಡೆಯಲಿದೆ.







