ಎಲ್ಗಾರ್ ಪರಿಷದ್ ಪ್ರಕರಣ ವರವರ ರಾವ್ ಜಾಮೀನು ವಿಸ್ತರಣೆ
ಮುಂಬೈ, ಫೆ. 26: 2018ರ ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ ಹಾಗೂ ತೆಲುಗು ಕವಿ ವರವರ ರಾವ್ ಅವರಿಗೆ ನೀಡಲಾಗಿದ್ದ ತಾತ್ಕಾಲಿಕ ಜಾಮೀನನ್ನು ಬಾಂಬೆ ಉಚ್ಚ ನ್ಯಾಯಾಲಯ 2022 ಮಾರ್ಚ್ 3ರ ವರೆಗೆ ವಿಸ್ತರಿಸಿದೆ.
2020 ಫೆಬ್ರವರಿಯಲ್ಲಿ ತನಗೆ ನೀಡಲಾದ ತಾತ್ಕಾಲಿಕ ಜಾಮೀನನ್ನು ವಿಸ್ತರಿಸುವಂತೆ ಹಾಗೂ 2018ರ ಪ್ರಕರಣದ ವಿಚಾರಣೆ ಬಾಕಿ ಇರುವ ವರೆಗೆ ಹೈದರಾಬಾದ್ ಗೆ ಸ್ಥಳಾಂತರಿಸಲು ಕೋರಿ ರಾವ್ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್.ಬಿ. ಶುಕ್ರಾ ಹಾಗೂ ಎ.ಬಿ. ಬೋರ್ಕರ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು. ರಾವ್ ಅವರ ಮನವಿಯ ವಿಚಾರಣೆಯನ್ನು ಪೀಠ 2022 ಮಾರ್ಚ್ 1ಕ್ಕೆ ಮುಂದೂಡಿದೆ. ಅಂದು ಅಂತಿಮ ವಿಚಾರಣೆ ನಡೆಯಲಿದೆ. ರಾವ್ ಅಲ್ಲದೆ, ಇನ್ನೋರ್ವ ಸಹ ಆರೋಪಿ ಪ್ರೊ. ಆನಂದ್ ತೇಲ್ತುಂಬ್ಡೆ ಕೂಡ ಜಾಮೀನು ನಿರಾಕರಣೆ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ನಿಯಮಗಳನ್ನು ಪ್ರಶ್ನಿಸಿ ಮನವಿ ಸಲ್ಲಿಸಿದ್ದಾರೆ. ಈ ಮನವಿಯ ವಿಚಾರಣೆ 2022 ಮಾರ್ಚ್ 2ರಂದು ನಡೆಯಲಿದೆ.
Next Story





