ಸಾಗರ: ಪುರಸಭೆ ಮಾಜಿ ಅಧ್ಯಕ್ಷ ಅಹಮದ್ ಅಲಿಖಾನ್ ನಿಧನ

ಅಹಮದ್ ಅಲಿಖಾನ್
ಸಾಗರ,ಫೆ.27 : ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಪುರಸಭಾಧ್ಯಕ್ಷ ಅಹಮದ್ ಅಲಿಖಾನ್ (90) ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಪಿ.ಡಬ್ಲ್ಯು.ಡಿ ಮತ್ತು ಅರಣ್ಯ ಗುತ್ತಿಗೆದಾರರಾಗಿದ್ದ ಅವರು ಪತ್ನಿ, ಮತ್ತು ನಾಲ್ವರು ಪುತ್ರರು,ಮೊಮ್ಮಕ್ಕಳನ್ನು ಅಗಲಿದ್ದಾರೆ.
ಐದು ಬಾರಿ ಸಾಗರ ಪುರಸಭೆಯ ಸದಸ್ಯರಾಗಿ, ಎರಡು ಬಾರಿ ಪುರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು,ಸರ್ವ ಧರ್ಮ ಸಹಿಷ್ಣುಯಾಗಿದ್ದ ಅವರು ಖಾನ್ ಸಾಹೇಬರೆಂದೇ ಜನಪ್ರಿಯರಾಗಿದ್ದರು.
ಮೃತರ ನಿಧನಕ್ಕೆ ಶಾಸಕರಾದ ಹಾಲಪ್ಪ ಹರತಾಳು,ಕುಮಾರ್ ಬಂಗಾರಪ್ಪ, ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು,ಕೆ.ಬಿ. ಪ್ರಸನ್ನ ಕುಮಾರ್,ಮಧು ಬಂಗಾರಪ್ಪ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪ್ರಫುಲ್ಲಾ ಮಧುಕರ್, ಪ್ರಸನ್ನ ಕುಮಾರ್ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭಾ ಸದಸ್ಯರಾದ ತಸ್ರೀಫ್ ಇಬ್ರಾಹಿಂ,ನಾದಿರಾ, ಮಾಜಿ ನಗರಸಭಾ ಸದಸ್ಯರಾದ ತಿ.ನ. ಶ್ರೀನಿವಾಸ,ಮಹಮ್ಮದ್ ಖಾಸಿಂ, ನಂದಾಗೊಜನೂರು, ಇನ್ನಿತರರು ಸಂತಾಪ ಸೂಚಿಸಿದ್ದಾರೆ.







