ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಟ್ವಿಟರ್ ಖಾತೆ ಹ್ಯಾಕ್: ಉಕ್ರೇನ್ ಬಿಕ್ಕಟ್ಟು, ಕ್ರಿಪ್ಟೋ ಕರೆನ್ಸಿ ಕುರಿತು ಪೋಸ್ಟ್

ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು ಉಕ್ರೇನ್ ಬಿಕ್ಕಟ್ಟು ಹಾಗೂ ಕ್ರಿಪ್ಟೋ ಕರೆನ್ಸಿ ಸಮಸ್ಯೆಗಳ ಕುರಿತು ಹಲವಾರು ಟ್ವೀಟ್‌ಗಳನ್ನು ರವಿವಾರ ಪೋಸ್ಟ್ ಮಾಡಲಾಗಿದೆ.
ಈ ಮೂಲಕ ಪ್ರಮುಖ ಸಾರ್ವಜನಿಕ ವ್ಯಕ್ತಿಯೊಬ್ಬರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
“ಟ್ವಿಟರ್ ಖಾತೆಯ ಹ್ಯಾಕ್ ವಿಚಾರ ಈಗ ನಿಯಂತ್ರಣದಲ್ಲಿದೆ. ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ನಾವು ಟ್ವಿಟರ್‌ನೊಂದಿಗೆ ಮಾತನಾಡುತ್ತಿದ್ದೇವೆ’’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ನಡ್ಡಾ ಅವರ ಖಾತೆಯಿಂದ ಒಂದು ಟ್ವೀಟ್ ನಲ್ಲಿ ಉಕ್ರೇನ್‌ಗೆ ಸಹಾಯ ಮಾಡಲು ದೇಣಿಗೆಯನ್ನು ಕೋರಿದೆ ಹಾಗೂ ಇನ್ನೊಂದು ಟ್ವೀಟ್ ನಲ್ಲಿ ರಷ್ಯಾಕ್ಕೆ ಸಹಾಯ ಮಾಡಲು ಪ್ರಯತ್ನಿಸಲಾಗಿದೆ. ಈಗ ಕ್ರಿಪ್ಟೋ ಕರೆನ್ಸಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನು ಸಂಕ್ಷಿಪ್ತವಾಗಿ ಹ್ಯಾಕ್ ಮಾಡಲಾಗಿದ್ದು, ಬಿಟ್‌ಕಾಯಿನ್‌ಗೆ ಸಂಬಂಧಿಸಿದ ಸಂದೇಶವನ್ನು ಪೋಸ್ಟ್ ಮಾಡಲಾಗಿತ್ತು.
ಸರಕಾರಿ ಇಲಾಖೆಗಳು ಸೇರಿದಂತೆ ಇತರ ಕೆಲವು ಹ್ಯಾಂಡಲ್‌ಗಳನ್ನು ಇತ್ತೀಚೆಗೆ ಹ್ಯಾಕ್ ಮಾಡಲಾಗಿತ್ತು.







