ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮುಡಿಪು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಇದರ ವಾರ್ಷಿಕ ಮಹಾಸಭೆಯು ಫೆಬ್ರವರಿ 24 ರಂದು ಡಿವಿಷನ್ ಅಧ್ಯಕ್ಷರಾದ ಮನ್ಸೂರ್ ಹಿಮಮಿ ಮರಿಕ್ಕಳ ರವರ ಅಧ್ಯಕ್ಷತೆಯಲ್ಲಿ ರಾಯಲ್ ಗಾರ್ಡನ್ ಹಾಲ್ ಮಿತ್ತಕೋಡಿ ಯಲ್ಲಿ ಜರಗಿತು.
ಎಸ್.ವೈ.ಎಸ್ ಮುಡಿಪು ಸೆಂಟರ್ ಸದಸ್ಯ ಶರೀಫ್ ಮುಡಿಪುರವರು ಸಭೆಯನ್ನು ಉದ್ಘಾಟಿಸಿದರು. ಎಸ್ಎಸ್ಎಫ್ ದ.ಕ. ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಅಬೀದ್ ನಹೀಮಿ ದುಆ ನೆರವೇರಿಸಿ ಸಂಘಟನಾ ತರಬೇತಿ ನಡೆಸಿದರು. ಪ್ರ. ಕಾರ್ಯದರ್ಶಿ ನೌಶಾದ್ ಮದನಿ ಎಚ್ ಕಲ್ಲು ವಾರ್ಷಿಕ ವರದಿ ಹಾಗೂ ಫಿನಾನ್ಸ್ ಕಾರ್ಯದರ್ಶಿ ಅಬೂಸ್ವಾಲಿ ಹರೇಕಳ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಅಲಿ ಮದನಿ, ಇರ್ಷಾದ್ ಹಾಜಿಯವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಮನ್ಸೂರ್ ಹಿಮಮಿ ಮರಿಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಮದನಿ ಹೆಚ್.ಕಲ್, ಫೈನಾನ್ಸ್ ಕಾರ್ಯದರ್ಶಿಯಾಗಿ ಅಬೂಸ್ವಾಲಿಹ್ ಹರೇಕಳ, ಕಾರ್ಯದರ್ಶಿಗಳಾಗಿ ನೌಫಲ್ ಫರೀದ್ ನಗರ (ರೀಡ್ ಪ್ಲಸ್), ಝೈನುದ್ದೀನ್ ಇರಾ (ಕ್ಯೂ.ಡಿ), ಮಸ್ಹೂದ್ ಬಾಹಸನಿ(ಕಲ್ಚರಲ್ ಕೌನ್ಸಿಲ್), ಇಲ್ಯಾಸ್ ಪೊಟ್ಟೋಳಿಕೆ (ಕ್ಯಾಂಪಸ್), ಸಿದ್ದೀಖ್ ಅಹ್ಸನಿ ಮುದುಂಗಾರ್ ಕಟ್ಟೆ (ರೈನ್ ಬೋ), ನಾಝಿಮ್ ಮೊಂಟೆಪದವು (ವಿಸ್ಡಂ), ಬಾತಿಷ್ ಹಿಮಮಿ ಸಖಾಫಿ ಕೊಲ್ಲರಕೋಡಿ (ದಅವಾ), ಶರೀಫ್ ಪಾನೇಲ (ಮೀಡಿಯಾ)ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುನೀರ್ ಕಲ್ಮಿಂಜ, ಉಬೈದುಲ್ಲಾ ಆರ್ ಜಿ ನಗರ, ಸಮದ್ ಮೊಂಟೆಪದವು, ಮುನೀರ್ ಬೈತಾರ್, ಜುನೈದ್ ಮರ್ಝೂಕಿ ಇರಾಮೂಲೆ, ಅಬೂಸಾಲಿ ಫಜೀರ್, ರಾಫಿ ಜಾರದಗುಡ್ಡೆ, ಆಸಿಫ್ ಅಕ್ಸಾ ಮುಡಿಪು, ರಫೀಕ್ ಸಿ. ಎಚ್ ಬಾಳೆಪುಣಿ, ಮುಸ್ತಫಾ ತೋಕರಬೆಟ್ಟು, ಇಸ್ಹಾಕ್ ಬದ್ರಿಯಾ ನಗರ, ಇಜಾಝ್ ಫಜೀರು, ಜಬ್ಬಾರ್ ಬೋಳಿಯಾರ್, ಮನ್ಸೂರ್ ಮೋರ್ಲ ಆಯ್ಕೆಯಾದರು.
ನೌಫಲ್ ಫರೀದ್ ನಗರ ಸ್ವಾಗತಿಸಿ ಇಲ್ಯಾಸ್ ಪೊಟ್ಟೋಳಿಕೆ ವಂದಿಸಿದರು.