ಪಲ್ಸ್ ಪೋಲಿಯೊ ಅಭಿಯಾನಕ್ಕೆ ಚಾಲನೆ

ಮಂಗಳೂರು, ಫೆ.27: ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ರವಿವಾರ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಡಿಎಚ್‌ಒ ಡಾ. ಕಿಶೋರ್ ಕುಮಾರ್, ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್, ಕಾರ್ಪೊರೇಟರ್ ಪೂರ್ಣಿಮಾ, ಆರ್‌ಸಿಎಚ್ ಅಧಿಕಾರಿ ಡಾ. ರಾಜೇಶ್, ಲೇಡಿಗೋಶನ್‌ನ ಆರ್‌ಎಂಒ ಡಾ.ಬಾಲಕೃಷ್ಣ ರಾವ್, ರೋಟರಿಯ ಯತೀಶ್ ಬೈಕಂಪಾಡಿ, ಡಬ್ಲುಎಚ್‌ಒ ಇದರ ಡಾ. ಸತೀಶ್ ಚಂದ್ರ, ನೋಡಲ್ ಅಧಿಕಾರಿ ಡಾ. ಚಂದ್ರಿಕಾ ಉಪಸ್ಥಿತರಿದ್ದರು.
Next Story