ಕುದ್ರೋಳಿ ಜಾಮಿಯಾ ಮಸೀದಿಯ ಅಧ್ಯಕ್ಷರಾಗಿ ಮುಹಮ್ಮದ್ ಮಸೂದ್ ಪುನರಾಯ್ಕೆ

ಮುಹಮ್ಮದ್ ಮಸೂದ್
ಮಂಗಳೂರು, ಫೆ.27: ನಗರದ ಕುದ್ರೋಳಿಯ ಜಾಮಿಯಾ ಮಸೀದಿಯ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಪುನರಾಯ್ಕೆಗೊಂಡಿದ್ದಾರೆ.
ಮಸೀದಿಯ ಸಭಾಂಗಣದಲ್ಲಿ ರವಿವಾರ ನಡೆದ ಮಹಾಸಭೆಯಲ್ಲಿ 2022-2025ನೆ ಸಾಲಿನ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಯೂಸುಫ್ ಕಾರ್ದಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎ.ಖಲೀಲ್ ಅಹ್ಮದ್, ಕಾರ್ಯದರ್ಶಿಯಾಗಿ ಮಕ್ಬೂಲ್ ಅಹ್ಮದ್, ಖಜಾಂಚಿಯಾಗಿ ತಜ್ಮುಲ್ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ಆಸೀಫ್ ಸರ್ಪುದ್ದೀನ್, ಸದಸ್ಯರಾಗಿ ಡಾ. ಮುಹಮ್ಮದ್ ಆರೀಫ್ ಮಸೂದ್, ಅಬ್ದುಲ್ ಖಾಲಿಕ್, ಅಶ್ಪಕ್ ಅಹ್ಮದ್, ಸಯ್ಯದ್ ಇಕ್ಬಾಲ್, ಸಲೀಂ ಎಸ್. ಅವರನ್ನು ಆಯ್ಕೆಮಾಡಲಾಯಿತು.
Next Story