ಮಂಗಳೂರು: ಅಮೃತ ಮಹೋತ್ಸವದ ಸ್ಮರಣಾರ್ಥ ಮಕ್ಕಳ ಹಬ್ಬ

ಮಂಗಳೂರು, ಫೆ.27: ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ಸ್ಮಾರ್ಟ್ ಸಿಟಿ ಇದರ ಜಂಟಿ ಆಶ್ರಯದಲ್ಲಿ ಆಝಾದಿಕಾ ಅಮೃತ ಮಹೋತ್ಸವದ 75ನೇ ವರ್ಷದ ಸ್ಮರಣಾರ್ಥಕ ಮಕ್ಕಳ ಹಬ್ಬ ಕಾರ್ಯಕ್ರಮವು ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಕಾರ್ಪೊರೇಟರ್ ಜಗದೀಶ್ ಶೆಟ್ಟಿ, ಶಾಲಾ ಸಂಚಾಲಕಿ ಮಂಗಳಾಮೃತ ಪ್ರಾಣ, ಪ್ರಾಂಶುಪಾಲೆ ಡಾ. ಆರತಿ ಶೆಟ್ಟಿ, ಅಮೃತ ಕ್ಯಾಂಪಸ್‌ನ ನಿರ್ದೇಶಕ ಯತೀಶ್ ಬೈಕಂಪಾಡಿ, ಮನಪಾ ಸಹಾಯಕ ಅಭಿಯಂತರ ದೀಪ್ತಿ, ಆರೋಗ್ಯ ಇಲಾಖೆಯ ಅಧಿಕಾರಿ ಡಾ.ಮಂಜಯ್ಯ ಶೆಟ್ಟಿ ಪಾಲ್ಗೊಂಡಿದ್ದರು.
ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹಿರಿಯ ವಿಭಾಗದ ಮಕ್ಕಳಿಗಾಗಿ ನಿಧಾನಗತಿಯ ಸೈಕಲ್ ಓಟ, ಮುಖಕ್ಕೆ ಬಣ್ಣ ಹಚ್ಚುವುದು, ಆಶುಭಾಷಣ, ದೇಶಭಕ್ತಿ ಗೀತೆ, ಏಕಪಾತ್ರಾಭಿನಯ, ಅಣುಕು ಅಭಿನಯ, ಮಣ್ಣಿನಿಂದ ಮಾದರಿ ರಚನೆ ಮುಂತಾದ ಸ್ಪರ್ಧೆಗಳನ್ನು ನಡೆಸಲಾಯಿತು. ನೈನಾ ಜಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Next Story