ಸರಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಮಾವೇಶ
ಉಡುಪಿ, ಫೆ.27: ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಉಡುಪಿ ಜಿಲ್ಲಾ ಸಮಾವೇಶವು ಶನಿವಾರ ಜೀವ ವಿಮಾ ನೌಕರರ ಸಂಘದ ಕಚೇರಿ ಸಭಾಂಗಣದಲ್ಲಿ ಜರುಗಿತು.
ಸಮಾವೇಶವನ್ನು ಉದ್ಘಾಟಿಸಿದ ಸಂಘದ ರಾಜ್ಯ ಕಾರ್ಯದರ್ಶಿ ಹನುಮೆ ಗೌಡ ಮಾತನಾಡಿ, ಹೊರಗುತ್ತಿಗೆ ಪದ್ಧತಿ ರದ್ಧತಿ, ನೌಕರರ ಬಾಕಿ ವೇತನ ಸಂದಾಯ, ಹೊರಗುತ್ತಿಗೆ ಸಿಬ್ಬಂದಿಗಳನ್ನು ನಿವೃತ್ತಿವರೆಗೆ ಸೇವೆಯಲ್ಲಿ ಮುಂದು ವರಿಸುವ ಕುರಿತು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹೊರಗುತ್ತಿಗೆ ನೌಕರರ ಮಾ.10ರಿಂದ ಅನಿರ್ದಿಷ್ಟ ಸಾಮೂಹಿಕ ಧರಣಿ ಬೆಂಗಳೂರು ಚಲೋ ಹೋರಾಟ ಆಯೋಜಿಸಲಾಗಿದೆ. ಜಿಲ್ಲಾ ಹೊರಗುತ್ತಿಗೆ ಎಲ್ಲಾ ನೌಕರರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಣಿ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಮುಖಂಡ ಕವಿರಾಜ್ ಎಸ್. ಉಪಸ್ಥಿತರಿದ್ದರು.
Next Story