ಹಾಜಿ ಅಬುಲ್ ಕಲಾಮ್ ನಿಧನ

ಮಂಗಳೂರು, ಫೆ.27: ಚಿಕ್ಕಮಗಳೂರು ಜಿಲ್ಲೆಯ ಜಯಪುರದ ದಿ.ಬೈಕಂಡಿ ಇಸ್ಮಾಯಿಲ್ ಹಾಜಿಯ ಪುತ್ರ, ಮುನಾವರ ಕಾಫಿ ಎಸ್ಟೇಟ್ ಮತ್ತು ಟ್ರೇಡಿಂಗ್ ಮಾಲಕ, ಹಾಜಿ ಅಬುಲ್ ಕಲಾಮ್ (61) ಅಲ್ಪಕಾಲದ ಅನಾರೋಗ್ಯದಿಂದ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಸಂಜೆ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜಯಪುರ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ರಾಷ್ಟ್ರೀಯ ಸ್ಪೈಸಸ್ ಬೋರ್ಡಿನ ಸದಸ್ಯರಾಗಿ, ಕಾಫಿ ಬೋರ್ಡ್ ಆಫ್ ಇಂಡಿಯಾದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅಬುಲ್ ಕಲಾಂ ಅವರು ಶಿಕ್ಷಣ ಪ್ರೇಮಿಯಾಗಿದ್ದರು.
ದಾನಿಯೂ ಆಗಿದ್ದ ಅಬುಲ್ ಕಲಾಂ ಕಾಂಗ್ರೆಸ್ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರ ಅಂತ್ಯಕ್ರಿಯೆಯು ಸೋಮವಾರ ಪೂರ್ವಾಹ್ನ ಜಯಪುರ ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





