ಅನುಮಾನಾಸ್ಪದ ವ್ಯಕ್ತಿಯ ಬಂಧನ
ಮಂಗಳೂರು, ಫೆ.27: ನಗರದ ಪಂಪ್‌ವೆಲ್ ಬಸ್ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಕುಂಜತ್ತಬೈಲು ಸಮೀಪದ ದೇವಿನಗರದ ಅಬ್ದುಲ್ ರಶೀದ್ ಹಸನ್ (54) ಎಂಬವರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮುಂಜಾವ ಸುಮಾರು 4:30ಕ್ಕೆ ಪೊಲೀಸರು ಗಸ್ತು ನಿರತರಾಗಿದ್ದ ವೇಳೆ ಅಬ್ದುಲ್ ರಶೀದ್ ಹಸನ್ ಬಸ್ ನಿಲ್ದಾಣದ ಹಿಂದೆ ಮರೆಮಾಚಿಕೊಂಡಿದ್ದರು ಎನ್ನಲಾಗಿದೆ. ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಹಾಗಾಗಿ ಬಂಧಿಸಿ ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





