ಸೂಫಿ ಸಂತರರದು ಅಲ್ಲಾಹನ ಮಾರ್ಗ: ಎಂ.ಟಿ. ಉಸ್ತಾದ್
ಉಳ್ಳಾಲ ಉರೂಸ್ ಪ್ರಯುಕ್ತ ಕಾರ್ಯಕ್ರಮ

ಉಳ್ಳಾಲ : ಅಲ್ಲಾಹನ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸುವ ಮೂಲಕ ನಮ್ಮ ಜೀವನದ ಸಾರ್ಥಕ್ಯ ವಾಗಲಿ ಎಂದು ಸೈಯ್ಯದ್ ಜಲಾಲುದ್ದೀನ್ ತಂಙಳ್ ದುಗ್ಗಲಡ್ಕ ಹೇಳಿದರು.
ಜಮೀಯತ್ತುಲ್ ಉಲಮಾ ಕಾರ್ಯ ದರ್ಶಿ ಎಂ.ಟಿ. ಉಸ್ತಾದ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ,ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬರಬೇಕೆಂಬ ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಕರೆಯನ್ನು ಮಹಾ ಭಾಗ್ಯ ಎಂದು ಸ್ವೀಕರಿಸಿದೆ. ಉಳ್ಳಾಲ ದರ್ಗಾ ದಲ್ಲಿ ಅಂತ್ಯ ವಿಶ್ರಾಂತಿಗೈಯುತ್ತಿರುವ ಸೈಯದ್ ಮದನಿಯವರ ಸಮಕ್ಷಮದ ಮಹತ್ವ ವನ್ನು ನಾನು ಅರಿತಿದ್ದೇನೆ ಎಂದರು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ ಸೈಯ್ಯದುಲ್ ಉಲಮಾ ಜಿಫ್ರಿ ತಂಙಳ್ ರ ಉಸ್ತಾದರಾದ ಎಂ.ಟಿ.ಉಸ್ತಾದರ ಆಗಮನ ನಮ್ಮಲ್ಲಿ ರೋಮಾಂಚನ ಗೊಳಿಸಿದೆ, ಹುರುಪು -ಉತ್ಸಾಹವನ್ನು ತುಂಬಿದೆ ಎಂದರು.
ಈ ಸಂದರ್ಭದಲ್ಲಿ ಕೆ.ಎಂ.ಸಿ.ಸಿ ಆಂಬುಲೆನ್ಸ್ ಡ್ರೈವರ್ ಹನೀಫ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕುಟ್ಟಿ ಹಸನ್ ದಾರಿಮಿ ಉಸ್ತಾದ್ ಮಾತನಾಡಿ ಇಸ್ಲಾಮಿನ ನಿಯಮಗಳು ಸಾರ್ವಕಾಲಿಕ ವಿಜ್ಞಾನ ವಾಗಿವೆ ಎಂದು ಹೇಳಿದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಖ್ಯಾತ ಯುವ ವಾಗ್ಮಿ ಸಾಲಿಹ್ ಬತ್ತೇರಿ ಮಾತನಾಡಿ ಅಲ್ಲಾಹನೊಂದಿಗಿರುವ ನಮ್ಮ ಭಕ್ತಿ -ಸ್ನೇಹವನ್ನು ದೀರ್ಘ ಗೊಳಿಸುವ ಅಗತ್ಯವಿದೆ ಎಂದು ಉಪನ್ಯಾಸ ನೀಡಿದರು.
ಕುಟ್ಟಿ ಹಸನ್ ಮುಸ್ಲಿಯಾರ್ ಪ್ರಚಲಿತ ಸಮಸ್ಯೆಗಳ ಪರಿಹಾರ ನಮ್ಮ ನಡತೆಯಲ್ಲಿದೆ ಎಂದರು.
ವೇದಿಕೆ ಯಲ್ಲಿ ಖಾಝಿ ಅಹ್ಮದ್ ಮುಸ್ಲಿಯಾರ್ ಪಾತೂರು ಉಸ್ತಾದ್, ಶೈಖುನಾ ಉಸ್ಮಾನ್ ಫೈಝಿ ತೋಡಾರ್, ಇಮಾಮ್ ಅನ್ವರ್ ಅಲಿ ದಾರಿಮಿ, ಇಬ್ರಾಹಿಂ ಮದನಿ, ಅಬೂಬಕ್ಕರ್ ಮದನಿ ಪಾತೂರು, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಕಾರ್ಯದರ್ಶಿ ಅಝಾದ್ ಇಸ್ಮಾಯಿಲ್,ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಅಬೂಬಕ್ಕರ್ ಮುಕ್ಕಚೇರಿ, ಸಿದ್ದೀಕ್ ಅಝ್ ಹರಿ, ಅಬೂಝಿಯಾದ್ ಪಟ್ಟಾಂಬಿ, ಯು.ಕೆ.ಮೋನು, ರಫೀಕ್ ಹಾಜಿ ಕೊಡಾಜೆ, ಮಜೀದ್ ಫೈಝಿ, ಹನೀಫ್ ಹಾಜಿ ಉದಯ, ಹಕೀಂ ಪರ್ತಿಪ್ಪಾಡಿ, ತಬೂಕು ದಾರಿಮಿ, ಯುಸೂಫ್ ಉಳ್ಳಾಲ್ ಉಪಸ್ಥಿತರಿದ್ದರು.
ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಸ್ವಾಗತಿಸಿದರು. ಸಲಾಂ ಮದನಿ ಅಳಕೆ ಕಾರ್ಯ ಕ್ರಮ ನಿರ್ವಹಿಸಿದರು. ಉವೈಸ್ ಮದನಿ ಸಹಕರಿಸಿದರು.







