ಪಂಜಾಬ್ ಕಿಂಗ್ಸ್ ಗೆ ಮಯಾಂಕ್ ಅಗರ್ವಾಲ್ ನಾಯಕ

Photo: twitter
ಹೊಸದಿಲ್ಲಿ: ಈ ವರ್ಷ ನಡೆಯಲಿರುವ 15 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಗೆ (ಐಪಿಎಲ್) ಮಯಾಂಕ್ ಅಗರ್ವಾಲ್ ತಂಡದ ನಾಯಕನ ಪಾತ್ರವನ್ನು ನಿಭಾಯಿಸಲಿದ್ದಾರೆ ಎಂದು ಪಂಜಾಬ್ ಕಿಂಗ್ಸ್ ಸೋಮವಾರ ಪ್ರಕಟಿಸಿದೆ.
ಮಯಾಂಕ್ ಅವರು 2018 ರಿಂದ ಪಂಜಾಬ್ ಕಿಂಗ್ಸ್ನ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ತಂಡದ ಉಪನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಋತುವಿನಲ್ಲಿ ಸ್ವಲ್ಪ ಸಮಯ ತಂಡದ ನಾಯಕತ್ವವನ್ನು ವಹಿಸಿದ್ದಾರೆ.
"ನಾನು 2018 ರಿಂದ ಪಂಜಾಬ್ ಕಿಂಗ್ಸ್ನಲ್ಲಿದ್ದೇನೆ ಹಾಗೂ ಈ ಅದ್ಭುತ ತಂಡವನ್ನು ಪ್ರತಿನಿಧಿಸಲು ನಾನು ತುಂಬಾ ಹೆಮ್ಮೆಪಡುತ್ತೇನೆ. ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ" ಎಂದು ಪಂಜಾಬ್ ಕಿಂಗ್ಸ್ನ ನೂತನ ನಾಯಕ ಮಯಾಂಕ್ ಅಗರ್ವಾಲ್ ಪ್ರತಿಕ್ರಿಯಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶಿಖರ್ ಧವನ್, ಜಾನಿ ಬೈರ್ಸ್ಟೋವ್, ಶಾರುಖ್ ಖಾನ್ ಹಾಗೂ ಕಾಗಿಸೊ ರಬಾಡರನ್ನು ಖರೀದಿಸಿತು.
Next Story