ಮೈದಾನದಲ್ಲಿ ಕಣ್ಣೀರಿಟ್ಟ ಉಕ್ರೇನ್ ನ ಫುಟ್ಬಾಲ್ ಆಟಗಾರ; ವೀಡಿಯೊ ವೈರಲ್

Photo: Twitter/@slbenfica_en
ಎಸ್ಟಾಡಿಯೊ ಡ ಲುಝ್: ಉಕ್ರೇನ್ನ ರೋಮನ್ ಯಾರೆಮ್ಚುಕ್ ಅವರಿಗೆ ವಿಟೋರಿಯಾ ಎಸ್ಸಿ ವಿರುದ್ಧದ ತಮ್ಮ ಪ್ರೈಮಿರಾ ಲಿಗಾ ಹಣಾಹಣಿಯ ಸಂದರ್ಭದಲ್ಲಿ ರವಿವಾರ ಬೆನ್ಫಿಕಾ ಬೆಂಬಲಿಗರು ಎದ್ದು ನಿಂತು ಚಪ್ಪಾಳೆ ತಟ್ಟಿದ ನಂತರ ಕಣ್ಣೀರು ಹಾಕಿದರು. ಈ ವೀಡಿಯೊ ವೈರಲ್ ಆಗಿದೆ.
ಉಕ್ರೇನಿಯನ್ ಸ್ಟ್ರೈಕರ್ ಆರಂಭದಲ್ಲಿ ಆಡುವ 11ರ ಬಳಗದಲ್ಲಿ ಇರಲಿಲ್ಲ. ಆದರೆ 62 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಅವರು ಬಂದರು. ಅವರಿಗೆ ನಾಯಕನ ಆರ್ಮ್ಬ್ಯಾಂಡ್ ಅನ್ನು ಸಹ ನೀಡಲಾಯಿತು.
ರಶ್ಯಾದಿಂದ ಆಕ್ರಮಣಕ್ಕೊಳಗಾದ ಯಾರೆಮ್ಚುಕ್ ತಾಯ್ನಾಡನ್ನು ಬೆಂಬಲಿಸಿ ಬೆನ್ಫಿಕಾ ಬೆಂಬಲಿಗರು ಎದ್ದುನಿಂತು ಗೌರವ ನೀಡಿದರು.
ಬೆನ್ ಫಿಕಾ ತಂಡವು ಎಸ್ಟಾಡಿಯೊ ಡ ಲುಝ್ ನಲ್ಲಿ ನಡೆದ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. ಡಾರ್ವಿನ್ ನುನೆಝ್ ಎರಡು ಗೋಲು ಗಳಿಸಿದರು. ಇದೇ ವೇಳೆ ಗೊನ್ಕಾಲೊ ರಾಮೋಸ್ ಕೂಡ ಗೋಲು ದಾಖಲಿಸಿದರು.
ರಶ್ಯಾ ವಿರುದ್ಧ ಇಂಗ್ಲೆಂಡ್ ತನ್ನ ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಘೋಷಿಸುವುದರೊಂದಿಗೆ ಯುರೋಪಿನ ಹಲವು ಫುಟ್ಬಾಲ್ ರಾಷ್ಟ್ರಗಳಿಂದ ಉಕ್ರೇನ್ ಬೆಂಬಲವನ್ನು ಪಡೆದಿದೆ.
This moment... Speachless! pic.twitter.com/EpgNydnZer
— SL Benfica (@slbenfica_en) February 27, 2022
The incredible reception that Yaremchuk received from Benfica supporters after coming on the pitch literally moved him to tears. pic.twitter.com/XnBvNxgbTD
— Adrian Sousa (Rabona TV) (@Rabona_TV) February 27, 2022







