ಉಕ್ರೇನ್ನಲ್ಲಿ ರಾಜ್ಯದ 454 ಮಂದಿ ಸಿಲುಕಿರುವ ಮಾಹಿತಿ ಸಿಕ್ಕಿದೆ: ನೋಡಲ್ ಅಧಿಕಾರಿ ಮನೋಜ್ರಾಜನ್

ಸಾಂದರ್ಭಿಕ ಚಿತ್ರ- (Photo: Pti)
ಬೆಂಗಳೂರು, ಫೆ.28: ಕೆಲ ಅಧಿಕೃತ ಮಾಹಿತಿ ಪ್ರಕಾರ ಉಕ್ರೇನ್ನಲ್ಲಿ ರಾಜ್ಯದ 454 ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ನೋಡಲ್ ಅಧಿಕಾರಿ ಮನೋಜ್ರಾಜನ್ ಹೇಳಿದ್ದಾರೆ.
ಸೋಮವಾರ ನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ ಕರ್ನಾಟಕದ 37 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ. ಇಂದು ಸಂಜೆ ಏರ್ಏಷ್ಯಾ ಮೂಲಕ 6 ಜನ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದರು.
ಸದ್ಯ ಈಗ ಉಕ್ರೇನ್ನಲ್ಲಿ 3 ಕಡೆ ಕಫ್ರ್ಯೂ ಇದೆ ಎಂದ ಅವರು, ವಿದ್ಯಾರ್ಥಿಗಳು ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸೂಚನೆಗಳನ್ನು ಪಾಲಿಸಬೇಕು. ಏನೇ ಇದ್ದರೂ ರಾಯಭಾರ ಕಚೇರಿಯನ್ನು ಸಂಪರ್ಕಿಸಬೇಕು. ಬೇರೆ ಎಲ್ಲೂ ಕೂಡ ಸಂಚಾರದ ಅಗತ್ಯತೆ ಇಲ್ಲ ಎಂದು ನುಡಿದರು.
Next Story





