Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಮಂಗಳವಾರ ದೃಷ್ಟಿ ವಿಶೇಷಚೇತನರ ಕ್ರಿಕೆಟ್...

ಮಂಗಳವಾರ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಟೂರ್ನಿ ಆರಂಭ

ಇಂಡಸ್‍ ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನ- 2022

ವಾರ್ತಾಭಾರತಿವಾರ್ತಾಭಾರತಿ28 Feb 2022 2:06 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಮಂಗಳವಾರ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಟೂರ್ನಿ ಆರಂಭ

ಬೆಂಗಳೂರು: ಭಾರತೀಯ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಸಂಸ್ಥೆಯು (CABI) ಸಮರ್ಥನಮ್ ವಿಶೇಷ ಚೇತನರ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ 3ನೇ ಇಂಡಸ್ ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನ- 2022ಕ್ಕೆ ಫೆಬ್ರವರಿ 28ರಂದು ಚಾಲನೆ ದೊರೆಯಿತು. ಬೆಂಗಳೂರಿನ ಶಾಂತಲಾ ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಚಾನ್ಸರಿ ಪೆವಿಲಿಯನ್‍ನ ಗ್ರಾಂಡ್ ಬಾಲ್ ರೂಮ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಕ್ರಿಕೆಟ್ ಆಸಕ್ತರು ಹಾಗೂ ತಜ್ಞರು, ಲಾಭೇತರ ಸಂಸ್ಥೆಯ ಸಿಬ್ಬಂದಿ, ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರು, ಸರಕಾರದ ಗಣ್ಯರು, ಹಾಗೂ ದೃಷ್ಟಿ ವಿಶೇಷಚೇತನ ಕ್ರಿಕೆಟ್ ತಂಡದ ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ತಾವರ್ ಚಂದ್ ಗೆಹ್ಲೋಟ್ ಅವರು ಇಂಡಸ್‍ಇಂಡ್ ಬ್ಯಾಂಕ್ ದೃಷ್ಟಿವಿಶೇಷಚೇತನ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನ- 2022ರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇನ್ವೆಸ್ಟ್ ಮೆಂಟ್ ಆ್ಯಂಡ್ ಡೆಪ್ಯುಟಿ ಹೈಕಮಿಷನರ್ ನ ಸೌತ್ ಏಷ್ಯಾ ಟ್ರೇಡ್ ಕಮಿಷನರ್ ಅನ್ನಾ ಶಾಟ್‍ಬೋಲ್ಟ್, ಯುಎಸ್ ಕಾನ್ಸುಲೇಟ್‍ನ ಪಬ್ಲಿಕ್ ಅಫೇರ್ಸ್ ಕಾನ್ಸುಲ್ ಆಗಿರುವ ಅನ್ನೇ ಶೇಷಾದ್ರಿ, ಮಾಜಿ ಕ್ರಿಕೆಟಿಗ  ಸೈಯದ್  ಕಿರ್ಮಾನಿ, ಇಂಡಸ್‍ಇಂಡ್ ಬ್ಯಾಂಕ್‍ನ ಸಿಎಸ್‍ಆರ್ ವಿಭಾಗದ ಮುಖ್ಯಸ್ಥರಾದ ಶ್ರೀ ಮಟಿಲ್ಡಾ ಲೋಬೊ, ಯುನೈಟೆಡ್ ವೇ ಮುಂಬಯಿಯ ಕಮ್ಯುನಿಟಿ ಇನ್ವೆಸ್ಟ್‍ಮೆಂಟ್‍ನ ಉಪಾಧ್ಯಕ್ಷ ಶ್ರೀ ಅನಿಲ್ ಪರ್ಮಾರ್, ಸಮರ್ಥನಮ್ ಟ್ರಸ್ಟ್‍ನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಹಾಗೂ ಭಾರತೀಯ ದೃಷ್ಟಿವಿಶೇಷಚೇತನ ಕ್ರಿಕೆಟ್ ಸಂಸ್ಥೆಯ (CABI) ಅಧ್ಯಕ್ಷರಾದ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಮಾರ್ಚ್ 13ರಿಂದ ಯುಎಇನಲ್ಲಿ ನಡೆಯಲಿರುವ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ದೃಷ್ಟಿ ವಿಶೇಷಚೇತನ ತಂಡಗಳ ವಿರುದ್ಧದ ಟಿ20 ತ್ರಿಕೋನ ಸರಣಿಗೆ ಹೊರಡಲಿರುವ ಭಾರತ ತಂಡಕ್ಕೆ ರಾಜ್ಯಪಾಲರಾದ ತಾವರ್‍ಚಂದ್ ಗೆಹ್ಲೋಟ್ ಅವರು ಶುಭಾಶಯ ಕೋರಿದರು. ಈ ಟೂರ್ನಿಯ ಫೈನಲ್ ಪಂದ್ಯ ಮಾರ್ಚ್ 19ರಂದು ನಡೆಯಲಿದೆ. "ಯುಎಇಗೆ ತ್ರಿಕೋನ ಸರಣಿಗೆ ಹೊರಟಿರುವ ನಿಮಗೆ ಶುಭಾಶಯಗಳು,'' ಎಂದು ರಾಜ್ಯಪಾಲರು ಹೇಳಿದರು.

ದೃಷ್ಟಿ ವಿಶೇಷಚೇತನರ ಕ್ರಿಕೆಟ್‍ನ ಸಾಧನೆಗಳು, ಅದರ ಯಶಸ್ಸಿನ ಕತೆಗಳು, ಅದರ ಭವಿಷ್ಯ ಹಾಗೂ ಗುರಿಯೆಡೆಗಿನ ವಿಸ್ತರಿತ ಹಾದಿಯ ಬಗ್ಗೆ ವಿಮರ್ಶೆ ನಡೆಸುವುದೇ ಈ ಸಮ್ಮೇಳನದ ಉದ್ದೇಶವಾಗಿದೆ. ವಿಶ್ವ ದೃಷ್ಟಿ ವಿಶೇಷಚೇತನ ಕ್ರಿಕೆಟ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಭಾರತೀಯ ದೃಷ್ಟಿ ವಿಶೇಷಚೇತನ ಸಂಸ್ಥೆಯು ಅಡಿಯಲ್ಲಿ 30 ರಾಜ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, 25,000 ಕ್ರಿಕೆಟಿಗರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಸಂಸ್ಥೆಯು ಕ್ರಿಕೆಟ್  ಪ್ರವಾಸಗಳನ್ನು, ಟೂರ್ನಮೆಂಟ್‍ಗಳನ್ನು ಆಯೋಜಿಸುವುದು, ದೃಷ್ಟಿ ವಿಶೇಷಚೇತನರಿಗೆ ಕ್ರಿಕೆಟ್ ತರಬೇತಿ ನೀಡುವ ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಜತೆಗೆ ದೃಷ್ಟಿ ವಿಶೇಷಚೇತನ ಕ್ರಿಕೆಟ್ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತದೆ.

ಭಾರತೀಯ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಡಾ. ಮಹಾಂತೇಶ್ ಕಿವಡಸಣ್ಣವರ್ ಮಾತನಾಡಿ "ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಸಮ್ಮೇಳನವು ದೃಷ್ಟಿ ವಿಶೇಷಚೇತನರ ಕ್ರಿಕೆಟ್‍ನ ಮೈಲುಗಲ್ಲಾಗಿದೆ. ಈ ಸಮ್ಮೇಳನದ ಮೂಲಕ ಹೊಸ ಅನುಭವಗಳು, ಒಳನೋಟ, ದೃಷ್ಟಿ ವಿಶೇಷಚೇತನ ಕ್ರಿಕೆಟರ್‍ಗಳು ನಿರ್ದಿಷ್ಟವಾಗಿ ಭಾರತದಲ್ಲಿ ಹಾಗೂ ಜಾಗತಿಕವಾಗಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತವೆ," ಎಂದು ಹೇಳಿದರು.

ದಿನಪೂರ್ತಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿರುವ ದೃಷ್ಟಿ ವಿಶೇಷಚೇತನರ ಬದುಕು ಹೇಗೆ ಸಂಪೂರ್ಣವಾಗಿ ಪರಿವರ್ತನೆಗೊಂಡಿತು ಎಂಬುದರ ಮೇಲೆ ಬೆಳಕು ಚೆಲ್ಲಲಾಯಿತು. ಮುಖ್ಯವಾಹಿನಿಯ ಹಾಗೂ ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಕುರಿತಾಗಿ ಹಲವು ಚರ್ಚಾ ಗೋಷ್ಠಿಗಳು ನಡೆದವು. ಕ್ರೀಡೆಯ ಮಾನಸಿಕ ಸ್ಥಿತಿಗತಿ, ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಹಾಗೂ ಆಟಗಾರರ ಬೆಳವಣಿಗೆಯಲ್ಲಿ ಸಮರ್ಥನಮ್ ಸಂಸ್ಥೆಯ ಪಾತ್ರ, ಕಾರ್ಪೊರೇಟ್ ಸಂಸ್ಥೆಗಳ ನೆರವಿನಿಂದ ಕ್ರೀಡೆಗೆ ದೊರೆಯುವ ಲಾಭ, ಪರಿಣಾಮಕಾರಿ ಸಹಭಾಗಿತ್ವಗಳು, ವಿಶೇಷಚೇತನರ ಕ್ರೀಡಾಕ್ಷೇತ್ರದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ತೊಡಗಿಸಿಕೊಳ್ಳುವಿಕೆ ಹಾಗೂ ಪ್ರಾಯೋಜಕತ್ವ ಹಾಗೂ ಆರ್ಥಿಕ ನಿಧಿ ಸಂಚಯದ ಕುರಿತು ಸಂವಾದಗಳು ನಡೆದವು.

 ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ತಜ್ಞರು ಹಾಗೂ ಗಣ್ಯ ಭಾಷಣಕಾರರು, ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಅನ್ನು ಪರಿಣಾಮಕಾರಿಯಾಗಿ ಬೆಳೆಸಬಹುದಾದ ಕ್ರಮಗಳ ಕುರಿತು ಹೇಳುವ ಜತೆಗೆ ತಮ್ಮ ಜ್ಞಾನವನ್ನು ಹಂಚಿಕೊಂಡರು. ಹಿರಿಯ ಕ್ರಿಕೆಟಿಗರು ಮತ್ತು ದೃಷ್ಟಿ ವಿಶೇಷಚೇತನ ಕ್ರಿಕೆಟರ್‍ಗಳು ತಮ್ಮ ಕ್ರಿಕೆಟ್ ಅನುಭವ ಹಾಗೂ ಆಟದ ತಂತ್ರವನ್ನು ಕೂಡ ತಿಳಿಸಿಕೊಟ್ಟರು.

ಮಹಿಳೆಯರ ಕ್ರಿಕೆಟ್ ಟೂರ್ನಿ ಉದ್ಘಾಟನೆ:

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಇಂಡಸ್‍ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಮೆಂಟ್- 2022ಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ (ಐಎಎಸ್) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 

ಭಾರತದ ಮಾಜಿ ಕ್ರಿಕೆಟಿಗ ಶ್ರೀ ಸೈಯದ್ ಕಿರ್ಮಾನಿ, ಕರ್ನಾಟಕ ಸರಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಕೆ.ಎಸ್ ಲತಾ ಕುಮಾರಿ (ಐಎಎಸ್), ಇಂಡಸ್‍ಇಂಡ್ ಬ್ಯಾಂಕ್‍ನ ಸಿಎಸ್‍ಆರ್ ವಿಭಾಗದ ಮುಖ್ಯಸ್ಥರಾದ ಶ್ರೀ ಮಟಿಲ್ಡಾ ಲೋಬೊ, ಭಾರತ ತಂಡದ ಮಾಜಿ ಆಟಗಾರ ಹಾಗೂ ಕೆಎಸ್‍ಸಿಎನ ಮಾಜಿ ಕಾರ್ಯದರ್ಶಿ ಶ್ರೀ ಸುಧಾಕರ್ ರಾವ್, ಯುನೈಟೆಡ್ ವೇ ಮುಂಬಯಿಯ ಕಮ್ಯುನಿಟಿ ಇನ್ವೆಸ್ಟ್‍ಮೆಂಟ್‍ನ ಉಪಾಧ್ಯಕ್ಷ ಶ್ರೀ ಅನಿಲ್ ಪರ್ಮಾರ್, ಕೋಟಕ್ ಮಹೀಂದ್ರಾ ಬ್ಯಾಂಕ್‍ನ ಸಿಎಸ್‍ಆರ್ ಶ್ರೀ. ಕೆ. ಪಲ್ಲೊವೆ ರಾಜ್, ನೈಕ್‍ನ ಶ್ರೀ ಯೋಗಾನಂದ ಕೋಟೆ, ಡಾ. ಸುಭಾಷ್ ಮಹಾಜನ್ ಯುಎಸ್‍ಎ, ಸಮರ್ಥನಮ್ ಟ್ರಸ್ಟ್‍ನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಡಾ. ಮಹಾಂತೇಶ್ ಜಿ.ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮರ್ಥನಮ್ ಸಂಸ್ಥೆಯು ಫೆಬ್ರವರಿ ತಿಂಗಳಲ್ಲಿ ತನ್ನ ಬೆಳ್ಳಿ ಹಬ್ಬದ (25ನೇ ವರ್ಷ) ಸಂಭ್ರಮಾಚರಣೆಯನ್ನು ಮಾಡುತ್ತಿದ್ದು, ತನ್ನ 25 ವರ್ಷಗಳ ಸೇವೆಯನ್ನು ಪ್ರತಿನಿಧಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ20 ಟೂರ್ನಮೆಂಟ್ ಅದರಲ್ಲೊಂದು. ಮಾರ್ಚ್1ರಿಂದ ಆರಂಭಗೊಂಡು ಮಾರ್ಚ್ 5ರವರೆಗೆ ಬೆಂಗಳೂರಿನ ಮೂರು ಮೈದಾನಗಳಲ್ಲಿ ಇಂಡಸ್‍ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನ ಮಹಿಳೆಯರ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. 

ಇದರಲ್ಲಿ 14 ರಾಜ್ಯಗಳು ಪಾಲ್ಗೊಳ್ಳಲಿದ್ದು, 224 ಆಟಗಾರ್ತಿಯರು ಆಡಲಿದ್ದಾರೆ. ದೃಷ್ಟಿ ವಿಶೇಷಚೇತನರ ಕ್ರಿಕೆಟ್ ಇನ್ನೂ ಶೈಶವಾವಸ್ಥೆಯಲ್ಲಿದ್ದು, ಸರಿಸುಮಾರಾಗಿರುವ ಆಟಗಾರ್ತಿಯರ ಅಗತ್ಯಗಳನ್ನು ಪೂರೈಸಲು ಇನ್ನೂ ಆಗಿಲ್ಲ. ಅಂತೆಯೇ  ಜಾರ್ಖಂಡ್, ಒಡಿಶಾ, ದಿಲ್ಲಿ, ಕೇರಳ ಮತ್ತು ಕರ್ನಾಟಕಗಳಲ್ಲಿ ಕಳೆದ ಮೂರರಿಂದ ಐದು ವರ್ಷಗಳಲ್ಲಿ ದೃಷ್ಟಿ ವಿಶೇಷಚೇತನ ಮಹಿಳೆಯರು ಕ್ರಿಕೆಟ್ ಆಡುತ್ತಿದ್ದಾರೆ. ವಿಶೇಷಚೇತನರಿಗಾಗಿನ ಸಮರ್ಥನಮ್ ಟ್ರಸ್ಟ್ 2010ರಲ್ಲಿ ದೃಷ್ಟಿ ವಿಶೇಷಚೇತನರ ಕ್ರಿಕೆಟ್‍ನ ಜವಾಬ್ದಾರಿ ಹೊತ್ತುಕೊಂಡ ಬಳಿಕ, ದೃಷ್ಟಿ ವಿಶೇಷಚೇತನ ಮಹಿಳೆಯರ ಕ್ರಿಕೆಟ್ ಅನ್ನು ಸಾಧ್ಯವಿರುವ ಕ್ರೀಡೆಯನ್ನಾಗಿಸಲು ಸಾಕಷ್ಟು ಸಮಯ ಹಾಗೂ ಶ್ರಮವನ್ನು ವ್ಯಯಿಸಿದೆ.

ತಂಡಗಳು:

ಕರ್ನಾಟಕ, ಒಡಿಶಾ, ರಾಜಸ್ಥಾನ್, ಜಾರ್ಖಂಡ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಗುಜರಾತ್, ದಿಲ್ಲಿ, ಚಂಡಿಗಢ, ತಮಿಳುನಾಡು, ಹಾಗೂ ಪಶ್ಚಿಮ ಬಂಗಾಳ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ವಿಜೇತ ತಂಡ 1,04,000 ರೂಪಾಯಿ ಬಹುಮಾನ ಪಡೆದರೆ, ರನ್ನರ್ಸ್‍ರಪ್ ತಂಡ 80,000 ರೂ. ಬಹುಮಾನ ಗಳಿಸಲಿದೆ. ಪಂದ್ರಶ್ರೇಷ್ಠ ಪ್ರಶಸ್ತಿ ಪಡೆಯುವವರು ತಲಾ ಒಂದು ಟ್ರೋಪಿ ಹಾಗೂ 3000 ರೂ. ಗಳಿಸಿದರೆ, ಸರಣಿ ಶ್ರೇಷ್ಠ ಪುರಸ್ಕೃತರು ಟ್ರೋಫಿ ಹಾಗೂ 10,000 ರೂ. ನಗದು ಪಡೆಯಲಿದ್ದಾರೆ.

ಭಾರತ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಅವರು ಇಂಡಸ್‍ಇಂಡ್ ಬ್ಯಾಂಕ್ ದೃಷ್ಟಿ ವಿಶೇಷಚೇತನ ಮಹಿಳೆಯರ ಟಿ20 ರಾಷ್ಟ್ರೀಯ ಟೂರ್ನಮೆಂಟ್‍ನ ರಾಯಭಾರಿಯಾಗಿದ್ದಾರೆ.

ದೃಷ್ಟಿ ವಿಶೇಷಚೇತನ ಕ್ರಿಕೆಟ್ ಬಗ್ಗೆ

 ಸಮರ್ಥನಮ್ ಟ್ರಸ್ಟ್ 1997ರಲ್ಲಿ ಟ್ರಸ್ಟ್ ಆಗಿ ನೋಂದಣಿಯಾಯಿತು. ಕ್ರಿಕೆಟ್ ಮೇಲಿನ ತಮ್ಮ ಪ್ರೀತಿ ಹಾಗೂ ಅಭಿರುಚಿಯನ್ನು ವ್ಯಕ್ತಪಡಿಸಲು ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ದೃಷ್ಟಿ ವಿಶೇಷಚೇತನ ಕ್ರಿಕೆಟಿಗರು ಭಾರತದಲ್ಲಿ ಇದ್ದಾರೆ. ದೇಶದ ಇತರ ಕ್ರಿಕೆಟಿಗರಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಅವರೆಲ್ಲರ ಬಯಕೆಯಾಗಿದೆ. ಸಮರ್ಥನಮ್ ಟ್ರಸ್ಟ್ ತನ್ನ ಕ್ರೀಡಾ ವಿಭಾಗವಾಗಿರುವ ಸಿಎಬಿಐ ಮೂಲಕ ಅವರೆಲ್ಲರಿಗೂ ಈ ವಿಭಿನ್ನ ಅವಕಾಶವನ್ನು ಒದಗಿಸುತ್ತಿದೆ. ಕ್ರೀಡೆಯಲ್ಲದೆ ದೃಷ್ಟಿ ವಿಶೇಷಚೇತನರಿಗೆ ದೈಹಿಕ ವಿಶೇಷಚೇತನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿಕೊಡುತ್ತಿದೆ. ಈ ವೆಬ್‍ಸೈಟ್ ಮೂಲಕ ಸಂಸ್ಥೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಹುದು. www.samarthanam.org

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X