ಹಾಸನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಜೆಡಿಎಸ್– ಬಿಜೆಪಿ ಸದಸ್ಯರ ಮಧ್ಯೆ ಜಟಾಪಟಿ

ಧರಣಿ ನಡೆಸಿದ ಜೆಡಿಎಸ್ ಸದಸ್ಯರು
ಹಾಸನ: ಹಾಸನ ನಗರಸಭೆಯ ಸಾಮಾನ್ಯ ಎರಡನೇ ಸಭೆಯು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮಕ್ಕೆ ಕಾರಣವಾಯಿತು.
ಪೊಲೀಸ್ ಬಿಗಿ ಬಂದು ಬಸ್ತ್ ನಡುವೆ ನಡೆಯಿತು, ಬಿಜೆಪಿ ಅಧ್ಯಕ್ಷರ ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಬಳಿಕ ಎರಡೂ ಪಕ್ಷದ ಸದಸ್ಯರು ಪ್ರತ್ಯೇಕ ಪ್ರತಿಭಟನೆ ನಡೆಸಿದ್ದಾರೆ.
ನಗರಸಭೆ ಅಧ್ಯಕ್ಷ ಮೋಹನ್ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯ ಪ್ರಾರಂಭದಲ್ಲೆ ಜೆಡಿಎಸ್ ಸದಸ್ಯ ಗಿರೀಶ್ ಚನ್ನವೀರಪ್ಪ, ಚಂದ್ರೇಗೌಡ ಮತ್ತು ವಾಸುದೇವ್ ಸೇರಿದಂತೆ ಇತರೆ ಸದಸ್ಯರು ನಗರಸಭೆ ಸಾಮಾನ್ಯ ಸಭೆಯಲ್ಲಿ ನಾನಾ ವಿಚಾವರನ್ನಿಟ್ಟುಕೊಂಡು ಮಾತು ಬೆಳೆಸಿದಾಗ ಈ ವೇಳೆ ನಗರಸಭೆ ಅಧ್ಯಕ್ಷರ ಮತ್ತು ಸದಸ್ಯರ ನಡುವೆ ವಾಗ್ವಾದ ಉಂಟಾಯಿತು.
ಕೆಲ ಸಮಯ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರೆಲ್ಲರೂ ವಿಷಯಗಳ ಚರ್ಚೆ ಬಗ್ಗೆ ಮಾತನಾಡುವದ ಬಿಟ್ಟು ಇತರೆ ವಿಚಾರವನ್ನಿಟ್ಟುಕೊಂಡು ಕೂಗಾಟ ಕೇಳಿ ಬಂದಿತು. ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ನಡೆಯಿತು.
ನಂತರದಲ್ಲಿ ಜೆಡಿಎಸ್ ಸದಸ್ಯರು ಸಭೆ ಸಭಾಂಗಣದಲ್ಲಿ ಪ್ರತಿಭಟಿಸಿದರೇ ಬಿಜೆಪಿ ಅಧ್ಯಕ್ಷರು ಮತ್ತು ಸದಸ್ಯರು ನಗರಸಭೆ ಆಯುಕ್ತರ ಕಛೇರಿ ಎದುರು ಹೊರಗೆ ಕುಳಿತು ಪ್ರತಿಭಟನೆ ಮಾಡಿದರು.
ವಿಷಯ ತಿಳಿದ ಪೊಲೀಸ್ ಅಧಿಕಾರಿಗಳು ಮನ್ನೆಚ್ಚರಿಕ ಕ್ರಮವಾಗಿ ನಗರಸಭೆ ಆವರಣಕ್ಕೆ ವಿಶೇಷ ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಬಸ್ಸಿನಲ್ಲಿ ಕಳುಹಿಸಿದರು. ಸಭೆ ಮುಂದುವರೆಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದು ಧರಣಿಗೆ ಕುಳಿತಿದ್ದರು.
ನಗರಸಭೆ ಅಧ್ಯಕ್ಷ ಮೋಹನ್ ಮಾಧ್ಯಮದೊಂದಿಗೆ ಮಾತನಾಡಿ, ಮುಂದುವರಿದ ಸಾಮಾನ್ಯ ಸಭೆ ಇದ್ದು, ಮೊದಲ ಸಭೆಯಲ್ಲಿ ಜೆಡಿಎಸ್ ಸದಸ್ಯರು ಸಭೆ ಪೂರ್ಣ ಮಾಡದಾಗೆ ಸಮಯ ವ್ಯರ್ಥ ಮಾಡಿದರು. ವಿಷಯ ಪ್ರಸ್ತಾಪ ಮಾಡೋಣ ಎಂದಾಗ ಏಕಾಏಕಿ ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಚಂದ್ರೇಗೌಡ, ವಾಸುದೇವ್ ಈ ಮೂವರು ಅವಾಚ್ಯ ಪದಗಳಿಂದ ನಿಂಧಿಸಿದಲ್ಲದೇ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದಗ ಸದಸ್ಯರು ತಡೆಯದೆ ಹೋಗಿದ್ದರೇ ಇಷ್ಟೊತ್ತಿಗೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದರು.
ಬಿಜೆಪಿ ನಗರಸಭೆ ಸದಸ್ಯರು ಮಾತನಾಡಿ, ಪ್ರತಿಬಾರಿ ಸಭೆಯಲ್ಲೂ ಜೆಡಿಎಸ್ ಸದಸ್ಯರು ಅಡಚಣೆ ಮಾಡುತ್ತಾರೆ. ಕಳೆದ ಬಾರಿಯ ಸಭೆಯನ್ನು ಮುಂದುವರೆದ ಆಭಾಗವಾಗಿ ಸಭೆ ಪ್ರಾರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ಇಲ್ಲಸಲ್ಲದ ವಿಚಾರವನ್ನು ಸಭೆಯಲ್ಲಿ ತೆಗೆದು ವಾಗ್ವಾದ ನಡೆಸಿದರು. ಯಾವುದನ್ನು ಲೆಕ್ಕಿಸದೇ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿದರು. ಅವರಿಗೆ ಸಭೆ ಮಾಡಬಾರದಂತೆ, ಹಾಸನ ನಗರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ನಡೆಬಾರದಂತೆ ಮೊಟಕು ಆಗಬೇಕೆಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ ಇತರ ಸದಸ್ಯ ಅವರು ಮಾಧ್ಯಮದೊಂದಿಗೆ ಮಾತನಾಡಿ, ಸಾರ್ವಜನಿಕ ಹಿತಾದ ವಿಷಯಗಳನ್ನು ನಾವು ಒಪ್ಪಿದ್ದೇವೆ. ಹಿಂದಿನದು ಜಮಾ ಖರ್ಚಿನಲ್ಲಿ ಲೂಟಿ ಆಗಿರುವುದನ್ನು ಲೋಕಾಯುಕ್ತ ಮತ್ತು ಎಸಿಬಿ ತನಿಖೆ ಆಗಬೇಕು ಎಂದು ಬಹುಮತ ಮತ್ತು ಸರ್ವಾನುಮತದಿಂದ ಎರಡು ಮಧ್ಯೆ ತೀರ್ಮಾನ ಹೇಳಿದ ನಂತರ ಹೋಗಿದ್ದರು. ಕಾನೂನು ಪ್ರಕಾರ ರೆಸ್ಯುಲೇಷನನ್ನು ಸಭೆಯಾದ ಏಳು ತಿಂಗಳ ಒಳಗೆ ಕೊಡಬೇಕು. ನಾಲ್ಕು ತಿಂಗಳ ನಂತರ ರೆಸ್ಯುಲೇಶನ್ ಕಾಫಿ ಕೊಟು ಎಲ್ಲಾವು ಸರ್ವಾನುಮತ ಎಂದು ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ನರಸಭೆ ಅಧ್ಯಕ್ಷರಿಗೆ ಸಂವಿಧಾನವೆ ಗೊತ್ತಿಲ್ಲ. ಏಕಚಕ್ರದಿಪತ್ಯ ಎಂದು ತಿಳಿದುಕೊಂಡಿದ್ದಾರೆ. ಸಭೆ ಮಾಡಲು ದುರ್ಭಲವಾಗಿದ್ದು, ನೈತಿಕಹೊಣೆ ಹೊತ್ತು ನಗರಸಭೆ ಅಧ್ಯಕ್ಷರು ರಾಜೀನಾಮೆ ಕೊಡುವಂತೆ ಆಗ್ರಹಿಸಲಾಯಿತು.







