ನಂಜನಗೂಡು: ಮನೆಯೊಳಗೆ ನುಗ್ಗಿದ ಚಿರತೆ ಸೆರೆ

ಮೈಸೂರು,ಫೆ.28: ಮನೆಯೊಳಗೆ ನುಗ್ಗಿದ ಚಿರತೆಯೊಂದನ್ನುಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದ ಘಟನೆ ನಂಜನಗೂಡು ತಾಲೂಕಿನ ಹುರ ಸಮೀಪದ ಯಡಹಳ್ಳಿಯಲ್ಲಿ ನಡೆದಿದೆ.
ಮನೆಯೊಳಗೆ ನುಗ್ಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಯಡಹಳ್ಳಿ ಗ್ರಾಮದ ನಿವಾಸಿ ಚೆನ್ನಪ್ಪ ಪತ್ನಿ ಹಾಗೂ ಮಗನ ಜೊತೆ ಶನಿವಾರ ರಾತ್ರಿ 8.30ರ ಸುಮಾರಿಗೆ ಮನೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದರು. ಈ ವೇಳೆ ನಾಯಿಯನ್ನು ಅಟ್ಟಿಸಿ ಕೊಂಡು ಬಂದ ಚಿರತೆ ಮನೆ ಒಳಗೆ ನುಗ್ಗಿದೆ. ಇದರಿಂದ ಆತಂಕಗೊಂಡ ಚೆನ್ನಪ್ಪ, ಪತ್ನಿ ಹಾಗೂ ಮಗ ಮನೆಯಿಂದ ಹೊರಗೆ ಬಂದು ಬಾಗಿಲು ಹಾಕಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ 1ರ ಸುಮಾರಿಗೆ ಅರಿವಳಿಕೆ ಔಷಧ ನೀಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.
ಸೆರೆ ಸಿಕ್ಕಿರುವ ಚಿರತೆಗೆ ಎರಡು ವರ್ಷ ವಯಸ್ಸಾಗಿದ್ದು, ಅದನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





