ಜಲಶಕ್ತಿ ಯೋಜನೆ ಅನುಷ್ಠಾನ: ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು, ಫೆ. 28: ರಾಷ್ಟ್ರೀಯ ಹೆದ್ದಾರಿಗಳ ಪಕ್ಕದ ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಜಲಶಕ್ತಿ ಯೋಜನೆಯನ್ನು ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಲು ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳ ಅನುಷ್ಠಾನ ಸಂದರ್ಭದಲ್ಲಿ ಭೂಸ್ವಾಧೀನದ ಒಟ್ಟು ಮೊತ್ತದ ಶೇ.50 ಭಾಗವನ್ನು ರಾಜ್ಯ ಸರಕಾರ ಕೊಡಬೇಕು ಎಂಬ ನಿಯಮಕ್ಕೆ ತಿದ್ದುಪಡಿ ತಂದು, ಶೇ.25 ಮಾತ್ರ ಭರಿಸುವ ಬಗ್ಗೆ ಕೇಂದ್ರ ಸರಕಾರದ ಜತೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗುವುದು. ಮರಳು, ಕಬ್ಬಿಣ, ಸಿಮೆಂಟ್‌ನ ರಾಜಸ್ವ ಮತ್ತು ಜಿಎಸ್‌ಟಿ ಮೊತ್ತ ಮನ್ನಾ ಮಾಡಲು ಒಪ್ಪಂದ ಮಾಡಲಾಗುವುದು ಎಂದು ಸಿಎಂ ಹೇಳಿದರು.
ಹಲವು ವರ್ಷಗಳಿಂದ ಬಾಕಿಯಾಗಿರುವ ನಾಲ್ಕು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವ ನಿತಿನ್ ಗಡ್ಕರಿಗೆ ಸಂಸದ ನಳಿನ್ ಕುಮಾರ್ ಆಗ್ರಹಿಸಿದರು.
ನಂತೂರು ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಮುಲ್ಕಿ- ಕಟೀಲು- ಬಿ.ಸಿ.ರೋಡ್- ತಲಪಾಡಿ ಬೈಪಾಸ್‌ಗೆ ರಸ್ತೆ ಕಾಮಗಾರಿ ಆರಂಭಿಸಬೇಕು. ಎನ್‌ಐಟಿಕೆ ಟೋಲ್ ಗೇಟ್ ವಿಲೀನ ಅಥವಾ ತೆರವು ಮಾಡಬೇಕು. ಬೆಳ್ತಂಡಿಯಲ್ಲಿ ನಾಲ್ಕು ಕಿ.ಮೀ. ಚತುಷ್ಪಥ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದಾಗ, ಎಲ್ಲವನ್ನೂ ಮಾಡಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.