ಜಿಲ್ಲೆಗೆ ಪ್ರವೇಶ ನಿಷೇಧ: ಚೈತ್ರಾ ಕುಂದಾಪುರ ಕಲಬುರಗಿಯಿಂದ ಹಿಂದಕ್ಕೆ
ಜಿಲ್ಲಾ ಪ್ರವೇಶಕ್ಕೆ ಪೊಲೀಸರಿಂದ ಅನುಮತಿ ನಿರಾಕರಣೆ

ಕಲಬುರಗಿ: ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಆಳಂದಕ್ಕೆ ಹೋಗಲು ಯಾದಗಿರಿ ಮೂಲಕ ತೆರಳುತ್ತಿರುವ ಸಂದರ್ಭದಲ್ಲಿ ಪೋಲಿಸರು ವಾಡಿಯ ಬಳಿ ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.
ನಾಳೆ ಸಂಘಪರಿವಾರದ ಕಾರ್ಯಕರ್ತರು ರಾಘವ ಚೈತನ್ಯ ಶಿವಲಿಂಗ ಶುದ್ಧಿ ಕಾರ್ಯಕ್ಕೆ ಆಳಂದ ಪಟ್ಟಣದ ಲಾಡ್ಲಾ ಮಶಾಕ್ ದರ್ಗಾಕ್ಕೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಳಂದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಭಾಗವಹಿಸಲು ಚೈತ್ರಾ ಕುಂದಾಪುರ ಆಗಮಿಸುತ್ತಿದ್ದರು.
ಯಾದಗಿರಿ ಯಿಂದ ಸೋಮವಾರ ಸಂಜೆ ಅಳಂದ ಹೋಗುತ್ತಿರುವ ವಿಷಯ ತಿಳಿದು ವಾಡಿಯ ಹೊರ ವಲಯದ ಬಲರಾಮ ವೃತ್ತದಲ್ಲಿ ಶಹಾಬಾದ್ ಪಿಎಸ್ಐ ಅಶೋಕ ಪಾಟೀಲ , ಚಿತ್ತಾಪುರ್ ಪಿಎಸ್ಐ ಎ.ಎಸ್. ಪಟೇಲ್ ಪೊಲೀಸ್ ಸಿಬ್ಬಂದಿಗಳಾದ ಗೀತಾ, ತೇಜಸ್ವಿನಿ, ನಾಗೇಂದ್ರ ತಳವಾರ, ನಿಂಗನಗೌಡ ಪಾಟೀಲ ಅವರು ತಡೆದು ಮನವೊಲಿಸಿ,ಯಾದಗಿರಿಗೆ ಹಿಂದಕ್ಕೆ ಕಳುಹಿಸಿದರು.
ಸೌಹಾರ್ದತೆಗೆ ಧಕ್ಕೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಇಬ್ಬರಿಗೂ ಈಗಾಗಲೇ ಕಲಬುರಗಿ ಜಿಲ್ಲೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ.