ಉಪ್ಪಿನಂಗಡಿ: ಕೆಂಪು ಕಲ್ಲಿನಟ್ಟಿ ಮಗುಚಿ ಬಿದ್ದು ಮೂರುವರೆ ವರ್ಷ ಪ್ರಾಯದ ಮಗು ಮೃತ್ಯು

ಉಪ್ಪಿನಂಗಡಿ: ಅಂಗಳದಲ್ಲಿ ಇರಿಸಲಾಗಿದ್ದ ಕೆಂಪು ಕಲ್ಲಿನಟ್ಟಿ ಮಗುಚಿ ಬಿದ್ದು ಮೂರುವರೆ ವರ್ಷ ಪ್ರಾಯದ ಗಂಡು ಮಗುವೊಂದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಬಾಯ್ತಾರು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಮೃತ ಮಗುವಿನ ಹೆಸರು ಮೊಹಮ್ಮದ್ ನೌಶೀರ್ ಎನ್ನಲಾಗಿದ್ದು, ಅಶ್ರಪ್ ಮತ್ತು ಸಮೀಮಾ ದಂಪತಿಯ ಪುತ್ರ. ಕಟ್ಟಡ ನಿರ್ಮಾಣಕ್ಕೆಂದು ಮನೆಯಂಗಳದಲ್ಲಿ ತಂದಿರಿಸಲಾಗಿದ್ದ ಕೆಂಪು ಕಲ್ಲಿನಟ್ಟಿಯ ಬಳಿ ಆಟವಾಡುತ್ತಿದ್ದ ನೌಶಿರ್ ಮೇಲೆ ಕಲ್ಲಿನಟ್ಟಿ ಮಗುಚಿ ಬಿದ್ದಿತ್ತು. ಇದೇ ಪರಿಸರದಲ್ಲಿ ಆಟವಾಡುತ್ತಿದ್ದ ಮಗು ಕಾಣದಾದಾಗ ಮನೆ ಮಂದಿ ಹುಡುಕಾಟ ನಡೆಸಿದರು.
ಈ ವೇಳೆ ಅಂಗಳದಲ್ಲಿ ಕಲ್ಲಿನಟ್ಟಿಯು ಬಿದ್ದಿರುವುದನ್ನು ಕಂಡು ಅಲ್ಲಿ ಪರಿಶೀಲಿಸಿದಾಗ ಮಗು ಕಲ್ಲಿನಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
Next Story