ಕೈಕಂಬ: ವಕ್ಫ್ ಇಲಾಖೆಗೆ ಸಂಬಂಧಪಟ್ಟ ಕಾನೂನು ಮಾಹಿತಿ, ಮಾರ್ಗದರ್ಶನ ಕಾರ್ಯಕ್ರಮ

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಂಗಳೂರು ಮತ್ತು ಗುರುಪುರ ರೇಂಜ್ ಮದ್ರಸ ಮ್ಯಾನೇಜ್‍ಮೆಂಟ್ ಕಮಿಟಿ ಇದರ ಜಂಟಿ ಆಶ್ರಯದಲ್ಲಿ ವಕ್ಫ್ ಇಲಾಖೆಗೆ ಸಂಬಂಧಪಟ್ಟ ಕಾನೂನು ಮಾಹಿತಿ, ಮಾರ್ಗದರ್ಶನ ಕಾರ್ಯಕ್ರಮವು ಕೈಕಂಬದಲ್ಲಿ ನಡೆಯಿತು.
ಕಾರ್ಯಕ್ರಮದ ಮಾಹಿತಿ ಮತ್ತು ಮಾರ್ಗದರ್ಶನವನ್ನು ಎಡ್ವಕೇಟ್ ಶೇಖ್ ಇಸಾಕ್ ನೀಡಿದರು. ಈ ಕಾರ್ಯಕ್ರಮವು ಇಂದಿನ ಪ್ರಸಕ್ತ ಸನ್ನಿವೇಶಕ್ಕೆ ಬಹಳ ಉಪಯುಕ್ತವಾಗಿದೆ, ಇದರ ಪ್ರಯೋಜನವನ್ನು ಎಲ್ಲಾ ಮಸೀದಿಯವರು ಪಡೆಯಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದ್ರಸ ಮ್ಯಾನೇಜ್‍ಮೆಂಟ್ ದ.ಕ. ಜಿಲ್ಲಾ ಕೋಶಾಧಿಕಾರಿ ಶಾಹುಲ್ ಹಮೀದ್ ಹಾಜಿ ಮೆಟ್ರೋ ತಿಳಿಸಿದರು.
ಬಾಷಾ ಗುರುಪುರ ಜೊತೆ ಕಾರ್ಯದರ್ಶಿ ಗುರುಪುರ ರೇಂಜ್ ಮದ್ರಸ ಮ್ಯಾನೇಜ್‍ಮೆಂಟ್, ಎಮ್.ಎಚ್ ಮುಹಿಯುದ್ದೀನ್ ಹಾಜಿ ಗೌರವಾಧ್ಯಕ್ಷರು ಗುರುಪುರ ರೇಂಜ್ ಮದ್ರಸ ಮ್ಯಾನೇಜ್‍ಮೆಂಟ್, ರಝಾಕ್ ಹಾಜಿ ಮರ್ಕಝ್ ನಗರ ಕೈಕಂಬ ಉಪಸ್ಥಿತರಿದ್ದರು.
ಗುರುಪುರ ಕೈಕಂಬ ಪರಿಸರದ ಹಲವಾರು ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕೋಶಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಕ್ಫ್ ಇಲಾಖೆಯ ಕಾನೂನು ಮಾಹಿತಿ ಪಡೆದುಕೂಂಡರು.
ಮುಖ್ತಾರ್ ಅಹ್ಮದ್, ಅಬ್ದುಲ್ ರಝಕ್ ಸಮದ್, ಸರಫ್ ರಾಝ್, ನೌಫಲ್, ಜೀಶನ್ ಅಲೀ, ಅನ್ಸಾರ್, ಶೇಖ್ ಇಶಾಕ್, ಇಸ್ಮಾಯಿಲ್ ಶಾಫಿ ಮುಂತಾದ ಮಂಗಳೂರಿನ ಪ್ರಖ್ಯಾತ ವಕೀಲರು ವಕ್ಫ್ ಇಲಾಖೆಯ ಕಾನೂನು ಮಾಹಿತಿ ನೀಡಿದರು.
ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು ಪ್ರಸ್ತಾವಿಕ ಮಾತು ನುಡಿದರು. ನೌಷದ್ ಹಾಜಿ ಸೂರಲ್ಪಾಡಿ ಸ್ವಾಗತಿಸಿದರು. ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಬಡಿಲ, ನಕಾಶ್ ಬಾಂಬಿಲ ಸಹಕರಿಸಿದರು.