ಕರಾಟೆ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಮಾ.1: ಚಿಟ್ಪಾಡಿ ಮಂಚಿ ವಿಶ್ವಕರ್ಮ ಸೇವಾ ಸಂಘದ ಆಶ್ರಯ ದಲ್ಲಿ ಬುಡಕಾನ್ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ವತಿಯಿಂದ ಕರಾಟೆ ತರಬೇತಿ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ, ಗೌರವ ಸಲಹೆಗಾರ ಭಾಸ್ಕರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ಕಾಳಿಕಾಂಬ ಮಹಿಳಾ ಸಂಘದ ಅಧ್ಯಕ್ಷೆ ಯಶೋಧ, ಉಡುಪಿ ಕರಾಟೆ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ರವಿ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ರೋಹಿತಾಕ್ಷ ಉದ್ಯಾವರ, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ, ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಡಿ.ಕಿಣಿ, ಉದ್ಯಮಿಗಳಾದ ಮರವಂತೆ ನಾಗರಾಜ್ ಹೆಬ್ಬಾರ್, ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು. ನಂದಿನಿ ಸ್ವಾಗತಿಸಿದರು. ಕರಾಟೆ ಶಿಕ್ಷಕಿ ರೋಶನಿ ವಂದಿಸಿದರು.
Next Story