371(ಜೆ) ವಿಧಿ ಪ್ರಶ್ನಿಸಿ ಹೈಕೋರ್ಟ್‍ಗೆ ರಾಯಚೂರಿನ ಶಿಕ್ಷಣ ಸಂಸ್ಥೆಯ ಅರ್ಜಿ

ಬೆಂಗಳೂರು: ಭಾಷಾ ಅಲ್ಪಸಂಖ್ಯಾತರ ಸಂಸ್ಥೆಯಾಗಿರುವ ರಾಯಚೂರು ನವೋದಯ ವೈದ್ಯಕೀಯ ಸಂಸ್ಥೆಯು ತಮ್ಮ ಸಂಸ್ಥೆಗೆ 371 ಜೆ ವಿಶೇಷ ಸ್ಥಾನಮಾನದಡಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಕ್ಕೆ ವಿನಾಯಿತಿ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆ ಮಾಡಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ರಾಯಚೂರು ನವೋದಯ ವೈದ್ಯಕೀಯ ಸಂಸ್ಥೆಯು ಎಸ್.ಆರ್.ರೆಡ್ಡಿ ಅವರ ಒಡೆತನದ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಭಾಷಾ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಈ ನವೋದಯ ಶಿಕ್ಷಣ ಸಂಸ್ಥೆಯು 371ಜೆ ವಿಧಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ.
ಆದರೆ, ಸ್ಥಳೀಯ ಜನಪ್ರತಿನಿಧಿಗಳು ನಮ್ಮ ನೆಲದಲ್ಲಿನ ಎಲ್ಲ ಸೌಲಭ್ಯಗಳನ್ನು ಪಡೆದು ಈ ಭಾಗದ ವಿದ್ಯಾರ್ಥಿಗಳಿಗೆ ನವೋದಯ ಶಿಕ್ಷಣ ಸಂಸ್ಥೆಯು ಅನ್ಯಾಯ ಮಾಡುತ್ತಿದೆ ಎಂದು ಖಂಡಿಸಿದ್ದಾರೆ.
ಸ್ನಾತಕ ಮತ್ತು ಸ್ನಾತಕೋತ್ತರ ಸೇರಿ ಒಟ್ಟು 106 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದ್ದಾರೆ. ಅಲ್ಲದೆ, ಸಂಸತ್ತಿನಲ್ಲಿ 371 ಜೆ ತಿದ್ದುಪಡಿ ಮಾಡಿ ಅಂಗೀಕರಿಸಿದ ಕಾಯ್ದೆಯನ್ನು ಪ್ರಶ್ನಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.







