ಶಿವರಾತ್ರಿ ಪ್ರಯುಕ್ತ ಸಿಹಿತಿಂಡಿ, ತಂಪು ಪಾನೀಯ ನೀಡಿದ ಕಂದಕ್ ಮುಸ್ಲಿಂ ಜಮಾಅತ್ ಸದಸ್ಯರು

ಮಂಗಳೂರು : ನಗರದ ಕಂದಕ್ ಪ್ರದೇಶದ ಬದ್ರಿಯಾ ಜಂಕ್ಷನ್ ವಠಾರದಲ್ಲಿ ಶಿವರಾತ್ರಿ ಪ್ರಯುಕ್ತ ನಿತ್ಯಾನಂದ ಆಶ್ರಮ ವತಿಯಿಂದ ವರ್ಷಂಪ್ರತಿ ನಡೆಯುವ ಶೋಭಾಯಾತ್ರೆ ಪಾಲ್ಗೊಂಡವರಿಗೆ ಕಂದಕ್ ಮುಸ್ಲಿಂ ಜಮಾತಿನ ಸದಸ್ಯರು ಸಿಹಿತಿಂಡಿ ಹಾಗೂ ತಂಪು ಪಾನೀಯವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ರೊಂದಿಗೆ, ಮುಸ್ಲಿಂ ಜಮಾತಿನ ಸಿದ್ದೀಕ್, ಶರೀಫ್, ಆಸೀಫ್, ಅಶ್ರಫ್, ಅಲ್ತಾಪ್ ಕೆಪಿ, ಮುಸ್ತಫ, ಸಾಲಿ, ಇರ್ಫಾನ್, ಫಯಾಝ್, ಮುಕ್ತಾರ್, ಸಫ್ವಾನ್, ಶೌಕತ್, ಶಕೀಬ್, ಉಸ್ಮಾನ್ ಹಕೀಂ, ಮುಬೀನ್, ಫಾರೂಕ್, ತಾಹೀರ್, ನಿಝಾಮುದ್ದೀನ್, ಶಾಝ್, ರಿಲ್ವಾನ್ ಇವರೊಂದಿಗೆ ಶ್ರೀ ನಿತ್ಯಾನಂದ ಆಶ್ರಮದ ಸಮಿತಿಯ ಶ್ರೀ ಹನುಮಂತ ಕಾಮತ್, ರೋಹಿತ್, ಸದಾಶಿವ ಶೆಟ್ಟಿ, ಹರೀಶ್, ರಾಜ, ಕಮಲಾಕ್ಷ, ರವಿ, ಶೈಲೇಶ್, ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.