ಉಳ್ಳಾಲ; ವಲಿಯುದ್ದೀನ್ ಫೈಝಿ ನೇತೃತ್ವದಲ್ಲಿ ನೂರೇ ಅಜ್ಮೀರ್

ಉಳ್ಳಾಲ: ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ನಡೆಯುವ ಧಾರ್ಮಿಕ ಪ್ರವಚನ ವೇದಿಕೆ ಯಲ್ಲಿ ಶೈಖುನಾ ವಲಿಯುದ್ದೀನ್ ಫೈಝಿಯವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಪಾರಾಯಣ ನಡೆಯಿತು.
ಪ್ರವಾದಿಗಳ ಮತ್ತು ಸಂತ ಶ್ರೇಷ್ಠರ ಆದರ್ಶ ವ್ಯಕ್ತಿತ್ವವನ್ನು ಸ್ಮರಿಸಿ ಸ್ತುತಿ ಸಮರ್ಪಣೆ ನಡೆದವು.
ನೂರೇ ಅಜ್ಮೀರ್ ಪಠಣಕ್ಕಿಂತ ಮೊದಲು ನಡೆದ ಮತಪ್ರವಚನ ಕಾರ್ಯಕ್ರಮವನ್ನು ಇರ್ಶಾದ್ ದಾರಿಮಿ ಮಿತ್ತಬೈಲ್ ದುಆ ನಡೆಸಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ಮಾಜಿ ಸಚಿವ ರಹೀಂ ಖಾನ್ ಮಾತನಾಡಿ ಶುಭಾಶಯ ಕೋರಿದರು. ಮುಲ್ಕಿ ಜುಮಾ ಮಸೀದಿ ಖತೀಬ್ ಎಸ್.ಬಿ.ದಾರಿಮಿ ಉಸ್ತಾದ್ ಸಮಯೋಚಿತವಾಗಿ ಮಾತನಾಡಿದರು.
ಸಭೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಿತ್ತಬೈಲ್ ಉಸ್ತಾದ್ ಇರ್ಶಾದ್ ದಾರಿಮಿ, ಪ್ರಜಾವಾಣಿ ಛಾಯಾಗ್ರಾಹಕ ಇರ್ಶಾದ್ ವೇಣೂರು, ಉಳ್ಳಾಲ ದರ್ಗಾದ ಮಾಜಿ ಪದಾಧಿಕಾರಿ ಯು.ಎನ್.ಬಾವ ಹಾಜಿ, ದಯಾಮಾತೆ ಚರ್ಚ್ ಪಾನೀರ್ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಲಯನ್ಸ್ ಅಧ್ಯಕ್ಷ ಪ್ರಕಾಶ್ ಪಿಂಟೋ, ಶಿವಾಜಿ ಫ್ರೆಂಡ್ಸ್ ನ ಸಿರಿಲ್ ಡಿಸೋಜರನ್ನು ಈ ಸಂದರ್ಭ ಉಳ್ಳಾಲ ದರ್ಗಾ ವತಿಯಿಂದ ಸನ್ಮಾನಿಸಲಾಯಿತು.
ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನ ಇಕ್ಬಾಲ್ ಬಾಳಿಲ ನೂರೇ ಅಜ್ಮೀರ್ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಶೈಖುನಾ ಉಸ್ಮಾನ್ ಹಾಜಿ, ಇಮಾಮ್ ಅನ್ವರ್ ಅಲಿ ದಾರಿಮಿ, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ತ್ವಾಹ ಹಾಜಿ, ಅಮೀರ್ ಹಾಜಿ, ಮುಸ್ತಫ ಅಬ್ದುಲ್ಲ, ಆಸಿಫ್ ಅಬ್ದುಲ್ಲ, ಯೂಸುಫ್ ಉಳ್ಳಾಲ್, ಅಹ್ಮದ್ ಬಾವ, ಕತ್ತರ್ ಇಬ್ರಾಹಿಂ ಹಾಜಿ, ಸಾಗರ್ ಮುಹಮ್ಮದ್ ಹಾಜಿ, ಖಾದರ್ ಮುಸ್ಲಿಯಾರ್, ಹಮೀದ್ ಕೋಡಿ, ವುಂಞ ಮೋನು ಹಾಜಿ ಅಸೈ, ಕೌನ್ಸಿಲರ್ ಜಬ್ಬಾರ್, ಕಬೀರ್ ಚಾಯಬ್ಬ ಮುಂತಾದವರು ಉಪಸ್ಥಿತರಿದ್ದರು.
ಫಾರೂಕ್ ಉಳ್ಳಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







