Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಲುಷಿತಗೊಂಡ ಆಪರೇಷನ್ ಗಂಗಾ

ಕಲುಷಿತಗೊಂಡ ಆಪರೇಷನ್ ಗಂಗಾ

ವಾರ್ತಾಭಾರತಿವಾರ್ತಾಭಾರತಿ2 March 2022 9:13 AM IST
share
ಕಲುಷಿತಗೊಂಡ ಆಪರೇಷನ್ ಗಂಗಾ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಉಕ್ರೇನ್‌ನಿಂದ ಹೃದಯ ಬಿರಿವ ಸುದ್ದಿಗಳು ಭಾರತಕ್ಕೂ ಅಪ್ಪಳಿಸುತ್ತಿವೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿಗಳು ಭಾರತದ ನೆರವಿಗಾಗಿ ಅಂಗಲಾಚುತ್ತಿರುವಾಗಲೇ ಕರ್ನಾಟಕದ ಮೂಲದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಸುದ್ದಿಯೊಂದು ಎಲ್ಲರನ್ನು ದುಃಖಕ್ಕೆ ತಳ್ಳಿದೆ. ಪ್ರಧಾನಿ ಮೋದಿಯವರ ‘ಆಪರೇಷನ್ ಗಂಗಾ’ ಈ ಸಾವಿನಿಂದ ಕಲುಷಿತಗೊಂಡಿದೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಹಲವು ವಿದ್ಯಾರ್ಥಿಗಳನ್ನು ರಶ್ಯನ್ ಸೇನೆ ಅಪಹರಿಸಿದೆ ಎಂದು ಹೇಳಿಕೆ ನೀಡುವ ವೀಡಿಯೊಗಳು ಪ್ರಸಾರವಾಗುತ್ತಿವೆ. ಈಗಾಗಲೇ ಹಲವು ವಿದ್ಯಾರ್ಥಿಗಳು ತಮ್ಮ ಅಸಹಾಯಕ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ನೆರವನ್ನು ನೀಡುವಲ್ಲಿ ಸರಕಾರ ವಿಫಲವಾಗಿರುವುದರಿಂದಲೇ ಅವರಿಂದು ಅತಂತ್ರರಾಗಿದ್ದಾರೆ. ಎರಡು ದಿನಗಳ ಹಿಂದೆ ಒಂದಿಷ್ಟು ವಿದ್ಯಾರ್ಥಿಗಳನ್ನು ಕರೆತಂದು, ಅದನ್ನು ವೀಡಿಯೊ ಚಿತ್ರೀಕರಿಸಿ ಮಾಧ್ಯಮಗಳ ಮೂಲಕ ‘ರೋಚಕ’ವಾಗಿ ಪ್ರಚಾರ ಮಾಡಿದ ಸರಕಾರ, ತನ್ನೆಲ್ಲ ವೈಫಲ್ಯಗಳನ್ನು ಮುಚ್ಚಿ ಹಾಕಲು ಹರಸಾಹಸ ಪಡುತ್ತಿದೆ. ವಾಸ್ತವ ಅತ್ಯಂತ ಭೀಕರವಾಗಿದೆ.

 ಕುವೈತ್ ಮೇಲಿನ ದಾಳಿ, ಲಿಬಿಯಾ ಮೇಲಿನ ದಾಳಿಯ ಸಂದರ್ಭದಲ್ಲೂ ದೊಡ್ಡ ಸಂಖ್ಯೆಯ ಭಾರತೀಯರು ಸಿಲುಕಿಕೊಂಡಿದ್ದರು. ಆದರೆ ಆಗ ಸರಕಾರ ಈ ರೀತಿಯ ವೈಫಲ್ಯವನ್ನು ಅನುಭವಿಸಿರಲಿಲ್ಲ. ಕುವೈತ್ ಮೇಲೆ ಸದ್ದಾಂ ದಾಳಿ ಮಾಡಿದಾಗ ಒಂದು ಲಕ್ಷಕ್ಕೂ ಅಧಿಕ ಭಾರತೀಯರು ಯುದ್ಧಭೂಮಿಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಮತ್ತೆ ತಾಯ್ನೆಡಿಗೆ ಕರೆಸುವಲ್ಲಿ ಅತಿ ದೊಡ್ಡ ಕಾರ್ಯಾಚರಣೆ ನಡೆಯಿತು. ಅದರಲ್ಲಿ ಭಾರತ ಯಶಸ್ಸನ್ನೂ ಪಡೆಯಿತು. ಲಿಬಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಅಲ್ಲಿ 15,000ಕ್ಕೂ ಅಧಿಕ ಭಾರತೀಯರು ಸಿಲುಕಿಕೊಂಡಿದ್ದರು. ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಆಪರೇಷನ್ ಸೇಫ್ ಹೋಮ್ ಕಮಿಂಗ್’ ನಡೆಸಿದರು. ಏರ್‌ಫೋರ್ಸ್ ಮತ್ತು ಜಲ ಮಾರ್ಗಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಸಂದರ್ಭದಲ್ಲಿ ಬಳಸಿಕೊಂಡಿದ್ದರು. ಅವರು ಎಲ್ಲೂ ರಂಜನೀಯವಾದ, ರೋಚಕವಾದ ಭಾಷಣವನ್ನು ಮಾಡುತ್ತಾ ಕೂರಲಿಲ್ಲ. ಸೂಕ್ತ ಕ್ರಮವನ್ನಷ್ಟೇ ತೆಗೆದುಕೊಂಡರು. ಮಾಧ್ಯಮಗಳಲ್ಲಿ ಅದನ್ನು ತನ್ನ ಪ್ರಚಾರಕ್ಕೂ ಬಳಸಿಕೊಳ್ಳಲಿಲ್ಲ. ಅಂದು ಕೈಗೊಂಡ ಕ್ರಮಕ್ಕೆ ವಿಶ್ವವೇ ತಲೆಬಾಗಿತ್ತು.

ಉಕ್ರೇನ್‌ನಲ್ಲಿ ಯುದ್ಧ ಸಂಭವಿಸಿಯೇ ತೀರುತ್ತದೆ ಎನ್ನುವುದು ವಿಶ್ವ ಹಲವು ದಿನಗಳ ಮೊದಲೇ ಅರಿತುಕೊಂಡಿತ್ತು ಮತ್ತು ತಮ್ಮ ತಮ್ಮ ದೇಶದ ಜನರ ರಕ್ಷಣೆಗಾಗಿ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ ಭಾರತ ಮಾತ್ರ ಈ ಬಗ್ಗೆ ಯಾವ ಉತ್ಸಾಹವನ್ನೂ ತೋರಿಸಿರಲಿಲ್ಲ. ಸಾವಿರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ನಲ್ಲಿ ನೆಲೆಸಿದ್ದರು. ಇದು ಭಾರತಕ್ಕೆ ಗುಟ್ಟಿನ ಸಂಗತಿಯೇನೂ ಅಲ್ಲ. ಆದರೆ ಪ್ರಧಾನಿ ಮೋದಿಯವರಿಗೆ ಮಾತ್ರ ಇದು ಈಗಷ್ಟೇ ಗೊತ್ತಾಗಿದೆ. ‘‘ಭಾರತವನ್ನು ಬಿಟ್ಟು ಸಣ್ಣ ಸಣ್ಣ ರಾಷ್ಟ್ರಗಳಿಗೆ ವೈದ್ಯಕೀಯ ಕಲಿಯಲು ಯಾಕೆ ಹೋಗುತ್ತೀರಿ?’’ ಎಂದು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿದ್ಯಾರ್ಥಿಗಳಲ್ಲಿ ಪ್ರಧಾನಿ ಮೋದಿಯವರು ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಬೇಕಾದವರು ಸ್ವತಃ ಪ್ರಧಾನಿಯೇ ಆಗಿದ್ದಾರೆ. ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಹೀಗಿದ್ದರೂ ಭಾರತದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ನಂತಹ ಸಣ್ಣ ದೇಶಗಳಿಗೆ ಹೋಗಬೇಕಾದ ಸ್ಥಿತಿ ಯಾಕೆ ನಿರ್ಮಾಣವಾಗಿದೆ? ಇಂದು ಪ್ರತಿಮೆಗಳಿಗೆ ಹೂಡುವ ಹಣವನ್ನು ಶಿಕ್ಷಣಕ್ಕೆ ಹೂಡಿದ್ದಿದ್ದರೆ ಅವರಿಗೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತೆ? ವೈದ್ಯಕೀಯ ಶಿಕ್ಷಣ ಮತ್ತು ಇಂಜಿನಿಯರಿಂಗ್ ಶಿಕ್ಷಣ ಭಾರತದಲ್ಲಿ ದುಬಾರಿಯಾಗಿರುವುದೇ ಅವರು ಉಕ್ರೇನ್‌ಗೆ ಹೋಗಲು ಕಾರಣ. ಆದುದರಿಂದ ಇಂದು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಂಕಟಕ್ಕೆ ಸಿಲುಕಿರುವುದರ ಹೊಣೆಗಾರರು ಸ್ವತಃ ಪ್ರಧಾನಿಯೇ ಆಗಿದ್ದಾರೆ.

ಯುದ್ಧ ಶುರುವಾದ ಬಳಿಕ ಪ್ರಧಾನಿಯವರು ‘ಆಪರೇಷನ್ ಗಂಗಾ’ ಕಾರ್ಯಾಚರಣೆಯನ್ನು ಘೋಷಿಸಿದರು. ಈ ಕಾರ್ಯಚರಣೆಗೂ ಗಂಗಾ ನದಿಗೂ ಏನು ಸಂಬಂಧ? ಉತ್ತರ ಪ್ರದೇಶದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಭಾರತದೊಳಗಿನ ಜನರನ್ನು ಭಾವನಾತ್ಮಕವಾಗಿ ಮರುಳು ಗೊಳಿಸುವುದಕ್ಕಾಗಿ ಅವರು ಈ ಹೆಸರನ್ನಿಟ್ಟಿದ್ದಾರೆ. ನಮ್ಮ ನೆಲದ ಯುವಕರು ಸಾವು ಬದುಕಿನ ಜೊತೆಗೆ ಹೋರಾಡುತ್ತಿರುವಾಗಲೂ ಅದರಲ್ಲಿ ಚುನಾವಣಾ ಲಾಭವನ್ನು ಹುಡುಕಲು ಹೊರಟಿರುವುದು ಅತ್ಯಂತ ಅಮಾನವೀಯ. ಇಷ್ಟಕ್ಕೂ ಗಂಗಾನದಿಯನ್ನು ಶುದ್ಧಗೊಳಿಸುವ ಪ್ರಧಾನಿಯವರ ಆಪರೇಷನ್ ಎಂದೋ ವಿಫಲವಾಗಿದೆ. ಸಾವಿರಾರು ಕೋಟಿ ರೂಪಾಯಿಯನ್ನು ವ್ಯಯಿಸಿದರೂ ಗಂಗಾನದಿಯನ್ನು ರಕ್ಷಿಸುವ ಕೆಲಸ ಅವರಿಂದ ಸಾಧ್ಯವಾಗಿಲ್ಲ. ಇಂದಿಗೂ ಗಂಗಾನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕೊರೋನ ಕಾಲದಲ್ಲಿ ಸಾವಿರಾರು ಹೆಣಗಳು ಈ ಗಂಗಾನದಿಯಲ್ಲಿ ತೇಲಿ ಹೋದವು. ಉಕ್ರೇನ್ ವಿದ್ಯಾರ್ಥಿಗಳನ್ನು ರಕ್ಷಿಸುವ ಯೋಜನೆಗೆ ‘ಗಂಗಾ’ ನದಿಯ ಹೆಸರಿಟ್ಟಾಗ ದೇಶದ ಜನರ ಕಣ್ಣ ಮುಂದೆ ಬಂದುದು, ಗಂಗಾನದಿಯಲ್ಲಿ ತೇಲಿದ ಆ ಮೃತದೇಹಗಳು. ಇದೀಗ ಗಂಗೆಯನ್ನು ಇನ್ನಷ್ಟು ಕಲುಷಿತಗೊಳಿಸುವಂತೆ, ಕರ್ನಾಟಕದ ವಿದ್ಯಾರ್ಥಿಯೊಬ್ಬ ಉಕ್ರೇನ್‌ನಲ್ಲಿ ಬಲಿಯಾಗಿದ್ದಾನೆ. ಕಾರ್ಯಾಚರಣೆಗೆ ಮುನ್ನವೇ ಆಪರೇಷನ್ ವಿಫಲವಾಗಿದೆ. ಈ ಸಾವಿಗೆ ಸರಕಾರವೇ ಹೊಣೆ.

 ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸುವುದಕ್ಕಾಗಿ ರಾಜಕಾರಣಿಗಳು ನಡೆಸುತ್ತಿರುವ ಪ್ರಹಸನ ಇನ್ನಾದರೂ ನಿಲ್ಲಬೇಕು. ರಕ್ಷಣಾ ಕಾರ್ಯಾಚರಣೆಯಲ್ಲಿ ನಮ್ಮ ವಾಯುಪಡೆ ಮಹತ್ತರ ಪಾತ್ರವಹಿಸಬೇಕು. ಹಾಗೆಯೇ ಉಕ್ರೇನ್ ಸರಕಾರಕ್ಕೂ ವಿದ್ಯಾರ್ಥಿಗಳ ರಕ್ಷಣೆಯ ಹೊಣೆಯಿದೆ. ಆದುದರಿಂದ ಅವರಿಗೂ ಒತ್ತಡ ಹೇರುವ ಕೆಲಸ ನಡೆಯಬೇಕು. ವಿದ್ಯಾರ್ಥಿಗಳಿಗೆ ತುರ್ತು ನೆರವನ್ನು ಒದಗಿಸಿಕೊಡುವಲ್ಲಿ ರಾಯಭಾರಿ ಕಚೇರಿ ಕೈಚಾಚಬೇಕು. ಭಾರತೀಯ ವಿದ್ಯಾರ್ಥಿಗಳ ಮೇಲೆ ಒಂದೆಡೆ ರಶ್ಯನ್ ಸೈನಿಕರಿಂದ, ಮಗದೊಂದೆಡೆ ಉಕ್ರೇನ್ ಸೈನಿಕರಿಂದ ಹಲ್ಲೆಗಳು ನಡೆಯುತ್ತಿರುವ ವರದಿಗಳು ಬರುತ್ತಿವೆ. ತಕ್ಷಣ ಈ ಬಗ್ಗೆ ರಶ್ಯ ಮತ್ತು ಉಕ್ರೇನ್ ಜೊತೆಗೆ ಸರಕಾರ ಮಾತುಕತೆ ನಡೆಸಲಿ. ರಾಜಕಾರಣಿಗಳು ಬದಿಗೆ ಸರಿದು ನಿಂತು, ಪ್ರಾಮಾಣಿಕ, ಮುತ್ಸದ್ದಿ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮುನ್ನೆಲೆಗೆ ಬರಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X