'ಮಡಿಕೇರಿ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋ' ತಂಡ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಮಡಿಕೇರಿ : ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪೋಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋ ತಂಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದೆ.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬೋಜಮ್ಮ, ಕಾವೇರಮ್ಮ, ಪ್ರವೀಣ್, ಯಾನ ಶೆಟ್ಟಿ, ಆರ್ಯ, ಗ್ರೀಷ್ಮಾ, ಪಿ.ಸಿ.ತೇಜಸ್, ಅದಿತಿ, ಎಂ.ಆರ್ಯನ್, ಪ್ರಾಚಿ ಇವರುಗಳ ತಂಡ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದೆ.
ಜೂನ್ ನಲ್ಲಿ ಮಾಲ್ಡೀವ್ಸ್ ಅಥವಾ ಮಲೇಷ್ಯಾದಲ್ಲಿ ಅಂತರ ರಾಷ್ಟ್ರೀಯ ಸ್ಪರ್ಧೆ ನಡೆಯಲಿದೆ ಎಂದು ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ತರಬೇತುದಾರ ಮತ್ತು ಸಂಯೋಜಕ ಅಭಿಷೇಕ್ ತಿಳಿಸಿದ್ದಾರೆ.
Next Story





