ಉಳ್ಳಾಲ ಉರೂಸ್ ಪ್ರಯುಕ್ತ ಕಾರ್ಯಕ್ರಮ
ಉಳ್ಳಾಲ: ಉರೂಸ್ ಪ್ರಯುಕ್ತ ಗುರುವಾರ ಮಗ್ರಿಬ್ ನಮಾಝ್ ಬಳಿಕ ಅಬ್ಬಾಸ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುಆ ಆಶೀರ್ವಚನ ನೀಡಲಿದ್ದಾರೆ.
ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ. ಸಿರಾಜುದ್ದೀನ್ ಕಾಸಿಮಿ ಪಟ್ಟಣ ತಿಟ್ಪ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಶಾಸಕ ಯು.ಟಿ.ಖಾದರ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ
ಎನ್.ಕೆ.ಎಂ.ಶಾಫಿ ಸ ಅದಿ , ಯು.ಕೆ.ಮೋನು ಕಣಚೂರು, ಯೇನಪೋಯ ಅಬ್ದುಲ್ಲ ಕುಂಞಿ, ಡಾಕ್ಟರ್ ಮುಹಮ್ಮದ್ ಫಾಝಲ್ ರಝ್ವಿ ಕಾವಲ್ ಕಟ್ಟೆ,
ಸೆಯ್ಯದ್ ಮುಹಮ್ಮದ್ ಅಷ್ಖಾಫ್ ಮದನಿ ಸಹಿತ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Next Story





