Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪಾದಯಾತ್ರಿಗಳು ತಿಂದು ಎಸೆಯುವ ಆಹಾರ...

ಪಾದಯಾತ್ರಿಗಳು ತಿಂದು ಎಸೆಯುವ ಆಹಾರ ಸೇವಿಸಿ ಹಲವು ಜಾನುವಾರುಗಳ ಸಾವು; ಆರೋಪ

ಕರುವಿಗೆ ಸಾಂತ್ವನ ಹೇಳುತ್ತಿರುವ ರೈತನ ವೀಡಿಯೊ ವೈರಲ್

ಕೆ.ಎಲ್. ಶಿವುಕೆ.ಎಲ್. ಶಿವು2 March 2022 5:54 PM IST
share
ಪಾದಯಾತ್ರಿಗಳು ತಿಂದು ಎಸೆಯುವ ಆಹಾರ ಸೇವಿಸಿ ಹಲವು ಜಾನುವಾರುಗಳ ಸಾವು; ಆರೋಪ

ಚಿಕ್ಕಮಗಳೂರು: ನಿನ್ನಮ್ಮನನ್ನು ಸಾಯಿಸಿಬಿಟ್ರು ಮಗಳೇ, ಪಾದಯಾತ್ರೆಯವರು ನಿನ್ನಮ್ಮನನ್ನು ಸಾಯಿಸಿಬಿಟ್ರು, ಕೂಗಬೇಡ ಮಗಳೇ, ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿರುವ ಜನರಿಗೆ ದಾನಿಗಳು ತಿನ್ನಲು ಅನ್ನ ಕೊಟ್ಟರೆ ಅದನ್ನು ತಿನ್ನದೇ ರಸ್ತೆ ಬದಿಯಲ್ಲಿ ಎಸೆದು ನಿನ್ನಮ್ಮನನ್ನು ಸಾಯಿಸಿಬಿಟ್ರು, ನೀನು ಅಮ್ಮ ಬರಲಿಲ್ಲ ಅಂಥಾ ಎಷ್ಟು ಹೊಟ್ಟೆ ಉರಿದುಕೊಂಡು ಕೂಗುತಿದ್ದೀಯೋ ಹಾಗೆಯೇ ಅನ್ನ ದಾರಿಯಲ್ಲಿ ಎಸೆದವರ ಹೊಟ್ಟೆ ಉರಿದುಕೊಳ್ಳಲಿ ಅವರು ಒಳ್ಳೆ ಕೆಲಸಕ್ಕೆ ಹೋಗ್ತಿಲ್ಲ, ಅವರ ಮನೆನೂ ಹಾಳಾಗುತ್ತದೆ ಮಗಳೇ....

ಹೀಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವ ಯುವ ರೈತರೊಬ್ಬರು ತಾನು ಸಾಕಿದ್ದ ಹಸು ಪಾದಯಾತ್ರಿಗಳು ಎಸೆದಿದ್ದ ಅನ್ನವನ್ನು ತಿಂದು ಸತ್ತಿದ್ದು, ತಾಯಿಯನ್ನು ನೆನೆದು ರೋದಿಸುತ್ತಿರುವುದನ್ನು ಕಂಡು ದುಖಃದಿಂದ ಕರುವಿಗೆ ಸಾಂತ್ವನದ ಮಾತುಗಳನ್ನಾಡುತ್ತಿರುವ ದೃಶ್ಯ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ತೆರಳಲಾರಂಭಿಸಿದ್ದಾರೆ. ನಾಡಿನ ಬಹುತೇಕ ಜಿಲ್ಲೆಗಳ ಭಕ್ತರು ಚಿಕ್ಕಮಗಳೂರು, ಮೂಡಿಗೆರೆ ಮಾರ್ಗವಾಗಿ ಕೊಟ್ಟಿಗೆಹಾರ, ಚಾರ್ಮಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಹೀಗೆ ಹೊರ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಲಕ ಪಾದಯಾತ್ರೆಯಲ್ಲಿ ತೆರಳುವ ಭಕ್ತರು ದಾರಿಮಧ್ಯೆ ರಸ್ತೆ ಬದಿಯಲ್ಲಿ ತಾವು ಸೇವಿಸಿ ಎಲ್ಲೆಂದರಲ್ಲಿ ಎಸೆಯುತ್ತಿರುವ ಆಹಾರ ಜಾನುವಾರುಗಳ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿದೆ ಎಂದು ಆರೋಪಿಸಲಾಗಿದೆ.

ಗೋಣಿಬೀಡು ಗ್ರಾಮದ ಯುವ ರೈತ ಸಂದೀಪ್, ಸಾಕಿದ್ದ ಸಿಂದಿ ಹಸುವೊಂದು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಿರುವ ಭಕ್ತರು ತಿಂದು ಎಸೆದಿದ್ದ ಹಳಸಿದ ಅನ್ನವನ್ನು ತಿಂದು ಹೊಟ್ಟೆ ಉಬ್ಬರಿಸಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದು, ಈ ಹಸುವಿನ ಕರು ಸದ್ಯ ಅನಾಥವಾಗಿದೆ  ಎನ್ನಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ನೆರೆಹೊರೆ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಹಾಸನ, ತುಮಕೂರು, ಮೈಸೂರು ಮತ್ತಿತರ ಜಿಲ್ಲೆಗಳಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುವ ಭಕ್ತರು ಸದ್ಯ ಚಿಕ್ಕಮಗಳೂರು ನಗರದ ಮೂಲಕ ಮೂಡಿಗೆರೆ-ಕೊಟ್ಟಿಗೆಹಾರ-ಚಾರ್ಮಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಹಾಸನ ಜಿಲ್ಲೆ ಮೂಲಕ ಬರುವ ಭಕ್ತರು ಬೇಲೂರು ಮಾರ್ಗವಾಗಿ ಗೋಣಿಬೀಡು, ಮೂಡಿಗೆರೆ, ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ. ಹೀಗೆ ಬರುವ ಪಾದಯಾತ್ರಿಗಳು 100-200ರ ಸಂಖ್ಯೆಯಲ್ಲಿ ಗುಂಪು, ಗುಂಪಾಗಿ ಬರುತ್ತಿದ್ದು, ಹೀಗೆ ಬರುವ ಭಕ್ತರಿಗೆ ದಾರಿಮಧ್ಯೆ ಸಂಘಪರಿವಾರದ ಕಾರ್ಯಕರ್ತರೂ ಸೇರಿದಂತೆ ದಾನಿಗಳು ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಅಲ್ಲಲ್ಲಿ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಮತ್ತೆ ಕೆಲ ಭಕ್ತರು ರಸ್ತೆ ಬದಿಯಲ್ಲಿ ತಾವೇ ಅಡುಗೆ ತಯಾರಿಸಿ ಸೇವಿಸಿ ಪಾದಯಾತ್ರೆಯನ್ನು ಮುಂದುವರಿಸುತ್ತಿದ್ದಾರೆ. ಆದರೆ, ಹೀಗೆ ದಾನಿಗಳು ನೀಡುವ ಆಹಾರವನ್ನು ಸೇವಿಸುವ ಪಾದಯಾತ್ರೆಗಳು ಹೆಚ್ಚಾದ ಆಹಾರವನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ತಿಂದು ಹೆಚ್ಚಾದ ಆಹಾರವನ್ನು ಕೆಲವೆಡೆ ಒಂದೇ ಕಡೆ ರಾಶಿ ಹಾಕಿ ತೆರಳುತ್ತಿದ್ದಾರೆ ಆರೋಪಿಸಲಾಗಿದೆ.

ಪಾದಯಾತ್ರಿಗಳು ತಾವು ತಿಂದುಳಿದ ಆಹಾರವನ್ನು ಎಲ್ಲೆಂದರಲ್ಲಿ ಗುಡ್ಡೆ ಹಾಕಿ ಹೋಗುತ್ತಿರುವುದರಿಂದ ಜಿಲ್ಲಾದ್ಯಂತ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಬಿದ್ದು ನೈಮರ್ಲ್ಯ ಹಾಳಾಗುತ್ತಿರುವುದು ಒಂದೆಡೆಯಾದರೆ ಹೀಗೆ ಎಸೆದ ಆಹಾರವನ್ನು ಹಳಸಿದ ಮೇಲೆ ಬೀಡಾಡಿ ದನಗಳು, ಗ್ರಾಮೀಣ ಭಾಗದ ರೈತರ ಜಾನುವಾರುಗಳು ತಿನ್ನುತ್ತಿರುವುದರಿಂದ ಕಲುಷಿತಗೊಂಡ ಆಹಾರ ತಿಂದ ಜಾನುವಾರುಗಳು ಹೊಟ್ಟೆ ನೋವಿನಿಂದ ಬಳಲುತ್ತ ಸಾಯಲಾರಂಭಿಸಿವೆ. ಕಳೆದ ಕೆಲವೇ ದಿನಗಳಲ್ಲಿ ಮೂಡಿಗೆರೆ ತಾಲೂಕಿನ ಕಸ್ಕೆಬೈಲ್ ಗ್ರಾಮದಿಂದ ಗೋಣಿಬೀಡು ಗ್ರಾಮದ ವ್ಯಾಪ್ತಿಯಲ್ಲಿ ಪಾದಯಾತ್ರಿಗಳು ತಿಂದು ಎಸೆದ ಹಳಸಿದ ಅನ್ನ ತಿಂದು ಕೆಲವು ಹಸುಗಳು ಸಾವನ್ನಪ್ಪಿದರೆ, ಇನ್ನೂ ಹಲವು ಹಾಸನದಿಂದ ಮೂಡಿಗೆರೆವರೆಗೆ ಪಾದಯಾತ್ರಿಗಳ ಬೇಜವಾಬ್ದಾರಿಯಿಂದ ಸಾವನ್ನಪ್ಪಿವೆ ಎಂದು ಗೋಣಿಬೀಡು ಗ್ರಾಮದ ಯುವ ರೈತ ಸಂದೀಪ್ ಆರೋಪಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಪಶುವೈದ್ಯರ ಕೊರತೆ: 15 ದಿನಗಳಿಂದ ಮೂಡಿಗೆರೆ ತಾಲೂಕು ವ್ಯಾಪ್ತಿಯ ಹೆದ್ದಾರಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅನೇಕ ಜಾನುವಾರು ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ್ದು, ಇಂತಹ ಹಸುಗಳನ್ನು ಪಶುಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಹೋದರೆ ಆಸ್ಪತ್ರೆಗಳಲ್ಲಿ ಪಶುವೈದ್ಯರ ಕೊರತೆಯಿಂದಾಗಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಅನೇಕ ಜಾನುವಾರುಗಳು ಮೃತಪಟ್ಟಿವೆ. ಬೀಡಾಡಿದನಗಳು ಎಲ್ಲೆಂದರಲ್ಲಿ ಸತ್ತು ಬೀಳುತ್ತಿವೆ. ರಸ್ತೆ ಬದಿ ಇರುವ ಗ್ರಾಮಗಳ ಜನರು ತಮ್ಮ ಹಸುಗಳನ್ನು ರಸ್ತೆ ಬದಿಯಲ್ಲೇ ಮೇಯಲು ಬಿಡುವುದು ವಾಡಿಕೆ. ಆದರೆ ಸದ್ಯ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು ರಸ್ತೆ ಬದಿಯಲ್ಲಿ ಆಹಾರ ಸೇವಿಸಿ ತಾವು ತಿಂದು ಬಿಟ್ಟಿದ್ದನ್ನು ರಸ್ತೆ ಬದಿಯಲ್ಲೇ ರಾಶಿ ಹಾಕಿ ತೆರಳುತ್ತಿದ್ದಾರೆ. ಹೀಗೆ ರಸ್ತೆ ಬದಿಯಲ್ಲಿ ಎಸೆದ ಹಳಸಿದ ಅನ್ನವನ್ನು ರೈತರ ದನಕರುಗಳು ಬೇಕಾಬಿಟ್ಟಿಯಾಗಿ ತಿಂದು ಜೀರ್ಣಿಸಿಕೊಳ್ಳಲಾರದೇ ಸಾಯುತ್ತಿವೆ. ಈ ಭಾಗದಲ್ಲಿ ಎಷ್ಟೋ ರೈತರು ಜಾನುವಾರುಗಳನ್ನು ಸಾಕಿ ಅದರ ಹಾಲು ಮಾರಿ ಬದುಕುತ್ತಿದ್ದು, ಜೀವನಕ್ಕೆ ಆಧಾರವಾಗಿದ್ದ ಹಸುಗಳು ಪಾದಯಾತ್ರಿಗಳ ಬೇಜವಾಬ್ದಾರಿಗೆ ಬಲಿಯಾಗುತ್ತಿವೆ. ಧರ್ಮಸ್ಥಳಕ್ಕೆ ಹೋಗುವ ಪಾದಯಾತ್ರಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ರೈತ ಸಂದೀಪ್ ಆಗ್ರಹಿಸಿದರು.

ಜಾನುವಾರುಗಳು ಸಾಕಷ್ಟು ಅನ್ನ ತಿಂದರೆ ದಿಢೀರ್ ಸಾಯುವುದಿಲ್ಲ. ಆದರೆ, ಅವುಗಳಿಗೆ ಹೊಟ್ಟೆ ಉಬ್ಬರ ಆಗುವುದು ಸಾಮಾನ್ಯ. ಈ ವೇಳೆ ಚಿಕಿತ್ಸೆ ಕೊಡಿಸಿದರೆ ಸರಿಯಾಗುತ್ತವೆ. ಆದರೆ, ಹಳಸಿದ ಭಾರೀ ಪ್ರಮಾಣದಲ್ಲಿ ಅನ್ನವನ್ನು ತಿಂದರೆ ಹೊಟ್ಟೆ ಉಬ್ಬರ ಹೆಚ್ಚಾಗಿ ದನಗಳ ಹೊಟ್ಟೆ ಊದಿಕೊಂಡು ಸಾಯುವ ಸಂದರ್ಭ ಹೆಚ್ಚು. ಪಾದಯಾತ್ರಿಗಳು ತಿಂದು ಎಸೆದ ಆಹಾರ ತಿಂದು ಹಸುಗಳ ಸಾಯುತ್ತಿರುವ ಬಗ್ಗೆ ಇದುವರೆಗೂ ನನಗೆ ದೂರು ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲು ಸೂಚಿಸುತ್ತೇನೆ.

ಡಾ.ರಮೇಶ್, ಜಿಲ್ಲಾ ಉಪ ನಿರ್ದೇಶಕರು, ಪಶುಸಂಗೋಪನ ಇಲಾಖೆ, ಚಿಕ್ಕಮಗಳೂರು

ಕಳೆದ ಶನಿವಾರ ನಾನು ಸಾಕಿದ್ದ ಸಿಂಧಿ ಹಸುವೊಂದು ರಸ್ತೆ ಬದಿಯಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಪಾದಯಾತ್ರಿಗಳು ತಿಂದು ಎಸೆದಿದ್ದ ಅನ್ನವನ್ನು ತಿಂದಿದೆ. ರಾತ್ರಿ ವೇಳೆ ಹೊಟ್ಟೆ ನೋವಿನಿಂದ ಒದ್ದಾಡಿ ಸತ್ತಿದೆ. ಈ ಹಸು 15 ದಿನಗಳ ಹಿಂದೆ ಹೆಣ್ಣು ಕರುವಿಗೆ ಜನ್ಮನೀಡಿದ್ದು, ತಾಯಿಯನ್ನು ಕಳೆದುಕೊಂಡ ಕರು ಪ್ರತಿದಿನ ರೋದಿಸುತ್ತಿದೆ. ಕರುವಿನ ರೋದನ ಕೇಳಿಸಿಕೊಳ್ಳಲು ಆಗುತ್ತಿಲ್ಲ. ದಿನಕ್ಕೆ 2ರಿಂದ 3 ಲೀ. ಹಾಲು ನೀಡುತ್ತಿದ್ದ ಹಸುವಿನ ಸಾವಿಗೆ ಪರಿಹಾರ ನೀಡುವವರು ಯಾರು? ಗೋರಕ್ಷಕರು, ಸರಕಾರ ನಮ್ಮಂತ ಬಡ ರೈತರ ನೋವು ಅರ್ಥವಾಗುತ್ತಾ?, ಗೋರಕ್ಷಕರಿಗೆ ಸಾಧ್ಯವಾದರೆ ಕೊನೆ ಪಕ್ಷ ಧರ್ಮಸ್ಥಳಕ್ಕೆ ಹೋಗುವ ಪಾದಯಾತ್ರಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಿ.
ಸಂದೀಪ್, ಯುವ ರೈತ, ಗೋಣಿಬೀಡು

ಕಳೆದೊಂದು ವಾರದಿಂದ ಗೋಣಿಬೀಡು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 6 ಹಸುಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಈ ಹಸುಗಳು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು ರಸ್ತೆ ಬದಿಯಲ್ಲಿ ಎಸೆದ ಹಳಸಿದ ಅನ್ನ ಇತ್ಯಾದಿ ಆಹಾರ ಸೇವಿಸಿ ಮೃತಪಟ್ಟಿವೆ. ಗೋಣಿಬೀಡು ಗ್ರಾಮದಿಂದ ಕೊಟ್ಟಿಗೆಹಾರದವರೆಗೂ ಇಂತಹ ಪ್ರಕರಣಗಳ ಬಗ್ಗೆ ದೂರುಗಳು ಬರುತ್ತಿವೆ. ಕಳೆದ ಬಾರಿಯ ಶಿವರಾತ್ರಿ ಸಂದರ್ಭವೂ ಕೆಲವು ಹಸುಗಳು ಹೀಗೆಯೇ ಮೃತಪಟ್ಟಿದ್ದವೆಂದು ಗ್ರಾಮಸ್ಥರು ದೂರಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗೆ ಈ ಸಂಬಂಧ ಇಲಾಖೆಯಿಂದ ಪತ್ರ ಬರೆಯುವಂತೆಯೂ ಗ್ರಾಮಸ್ಥರು ಸೂಚಿಸಿದ್ದಾರೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ನಾಗರಾಜ್, ಗೋಣಿಬೀಡು ಪಶು ಆಸ್ಪತ್ರೆ ನಿರೀಕ್ಷಕ

share
ಕೆ.ಎಲ್. ಶಿವು
ಕೆ.ಎಲ್. ಶಿವು
Next Story
X