ಮಾ.3: ಮಣಿಪಾಲದಲ್ಲಿ ರಂಗಾಯಣದ ‘ವೀ ದಿ ಪೀಪಲ್ ಆಫ್ ಇಂಡಿಯಾ’ ನಾಟಕ
ಉಡುಪಿ, ಮಾ.2: ಶಿವಮೊಗ್ಗದ ರಂಗಾಯಣದ ‘ವೀ ದಿ ಪೀಪಲ್ ಆಫ್ ಇಂಡಿಯಾ’ ಎಂಬ ಸಂವಿಧಾನ ಕುರಿತ ನಾಟಕ ಪ್ರದರ್ಶನ ಮಣಿಪಾಲದ ಮಾಧವ ಪಾರ್ಕ್‌ನ ಆ್ಯಂಫಿ ಥಿಯೇಟರ್‌ನಲ್ಲಿ ಮಾಹೆಯ ಗಾಂಧಿಯನ್ ಸೆಂರ್ಟ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಆಶ್ರಯದಲ್ಲಿ ಮಾ.3 ರ ಗುರುವಾರ ಸಂಜೆ 6:00 ಗಂಟೆಗೆ ನಡೆಯಲಿದೆ.
ಮಾಹೆಯ ಸಾಂಸ್ಕೃತಿಕ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಾ.ಶೋಭಾ. ಯು.ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಮತ್ತು ಮಣಿಪಾಲ ಎಂಐಟಿಯ ಪ್ರೊ.ಫಣಿರಾಜ್ ಕೆ. ಉಪಸ್ಥಿತರಿರುವರು.
ನಾಟಕದ ರಚನೆ ಡಾ.ರಾಜಪ್ಪ ದಳವಾಯಿ, ನಿರ್ದೇಶನ: ಲಕ್ಷ್ಮಣ್ ಕೆ.ಪಿ, ಸಹಾಯಕ ನಿರ್ದೇಶನ: ಸಂಧ್ಯಾ ಅರಕೆರೆ, ಸಂಗೀತ: ಪೂರ್ವಿ ಕಲ್ಯಾಣಿ, ಶೋಧನ್ ಬಸ್ರೂರ್, ಚಂದ್ರಮ್ಮ ಆರ್, ಬೆಳಕು: ವಿನೀತ್ ಕುಮಾರ್ ಇವರದಾಗಿದೆ.
Next Story