ಉಕ್ರೇನ್ನಲ್ಲಿ ಸಿಲುಕಿರುವ ದ.ಕ.ಜಿಲ್ಲೆಯ 18 ವಿದ್ಯಾರ್ಥಿಗಳ ವಿವರ

ಫೈಲ್ ಫೋಟೊ
ಮಂಗಳೂರು, ಮಾ.2: ಯುದ್ಧ ಪೀಡಿತ ಉಕ್ರೇನ್ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ದ.ಕ.ಜಿಲ್ಲೆಯ 18 ಮಂದಿ ವಿದ್ಯಾರ್ಥಿಗಳ ವಿವರವನ್ನು ಬುಧವಾರ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಕಟಿಸಿದ್ದಾರೆ.
ನೈಮಿಶಾ (20), ಹೀನಾ ಫಾತಿಮಾ (20), ಡೇಲ್ ಅಂದ್ರೈನಾ ಲುವಿಸ್ (19), ಜೆ. ಅನುಷಾ ಭಟ್ (22), ಪ್ರಣವ್ ಕುಮಾರ್ ಎಸ್. (23), ಲಾಯ್ಡ ಆ್ಯಂಟನಿ ಪಿರೇರಾ (21), ಅನೈನಾ ಅನ್ನಾ (21), ಕ್ಲೇಟನ್ ಓಸ್ಮಂಡ್ ಡಿಸೋಜ (20), ಶೇಖ್ ಮುಹಮ್ಮದ್ ತ್ವಾಹಾ (19), ಅಂಶಿತಾ ರೇಶಲ್ ಪದ್ಮಶಾಲಿ (20), ಅಹ್ಮದ್ ಶಾದ್ ಅರ್ಶದ್ (21), ಮುಹಮ್ಮದ್ ಮಿಶಾಲ್ ಆರೀಫ್ (23), ಪೃಥ್ವಿರಾಜ್ ಭಟ್ (21), ಸಾಕ್ಷಿ ಸುಧಾಕರ್ (21), ಪ್ರೀತಿ ಪೂಜಾರಿ (25), ಲಕ್ಷಿತಾ ಪುರುಷೋತ್ತಮ್ (21), ಪೂಜಾ ಮಲ್ಲಪ್ಪ ಅಥಿವಾಲ್ (24), ಶಾಲ್ವಿನ್ ಪ್ರೀತಿ ಅರನ್ಹಾ (19) ಸಂಕಷ್ಟದಲ್ಲಿರುವವರಾಗಿದ್ದು, ಎಲ್ಲರೂ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ.
ಕೆಲವರು ಬಂಕರ್ನಿಂದ ಹೊರಬಂದು ತವರು ಸೇರಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವರು ಹಾಸ್ಟೆಲ್ ಗಳಲ್ಲಿದ್ದಾರೆ. ಮತ್ತೆ ಕೆಲವರು ವಿವಿಧ ಶೆಲ್ಡರ್ಗಳಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





