ಉಕ್ರೇನ್ ನಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್‍ಗೆ ಮೈಸೂರಿನಲ್ಲಿ ಸಂತಾಪ

ಮೈಸೂರು,ಮಾ.2: ಮೈಸೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮೈಸೂರಿನ ನಾಗರಿಕರು ರಾಮಸ್ವಾಮಿ ವೃತ್ತದ ಬಳಿ ಸೇರಿ ಬುಧವಾರ ಸಂಜೆ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್‍ಗೆ ಅತ್ಯಂತ ನೋವಿನ ಸಂತಾಪವನ್ನು ಸೂಚಿಸಿದರು.
ಸಂತಾಪ ಸಭೆಯಲ್ಲಿ ಮಾತನಾಡಿದ ಎಐಡಿಎಸ್‍ಓ ನಾಯಕರುಗಳು, ಉಕ್ರೇನಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳೇ, ನಿಮ್ಮೊಂದಿಗೆ ನಾವಿದ್ದೇವೆ! ಎಂದು ಬೆಂಬಲ ಸೂಚಿಸುತ್ತಾ, ಈ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುದ್ಧಕ್ಕೆ ಕುರಿತಾದ ತಟಸ್ಥ ನೀತಿಯನ್ನು ಕೈಬಿಟ್ಟು ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತುರ್ತಾಗಿ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಲೇಬೇಕು ಎಂಬ ಆಗ್ರಹ ಗಳನ್ನು ಸರ್ಕಾರದ ಮುಂದಿಟ್ಟರು.
Next Story





