ಮಂಗಳೂರು: 'ಟ್ಯಾಲೆಂಟ್' ಮೊಬೈಲ್ ಟೆಕ್ನಿಶಿಯನ್ ಕೋರ್ಸ್ ಸರ್ಟಿಫಿಕೆಟ್ ವಿತರಣೆ

ಮಂಗಳೂರು, ಮಾ.2: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ವತಿಯಿಂದ ನಡೆಸಲ್ಪಡುವ ಮೊಬೈಲ್ ಟೆಕ್ನಿಶಿಯನ್ ಕೋರ್ಸಿನ 38ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ವಿತರಣೆ ಹಾಗೂ 39ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭವು ಟ್ಯಾಲೆಂಟ್ ಸಭಾಂಗಣದಲ್ಲಿ ನಡೆಯಿತು.
ಗುರುಪುರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮುಸ್ಲಿಮ್ ಒಕ್ಕೂಟ ರಿಯಾದ್ ಘಟಕದ ಅಧ್ಯಕ್ಷ ಜಿ.ಕೆ.ಶೇಖ್, ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಜಿ ಸಿತಾರ್, ಮಾಸೂನ್ ಟೈಲ್ಸ್ ಗ್ರಾನೈಟ್ಸ್ ಇದರ ಮಾಲಕ ಮುನೀರ್ ಮೊಯ್ದಿನ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಟಿ.ಆರ್.ಎಫ್. ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.
ಮೊಬೈಲ್ ಟೆಕ್ನಿಶಿಯನ್ ವಿದ್ಯಾರ್ಥಿ ಸಿನಾನ್ ಅಲಿ ಕಿರಾಅತ್ ಪಠಿಸಿದರು. ಟಿ.ಆರ್.ಎಫ್. ಅಧ್ಯಕ್ಷ ರಿಯಾಝ್ ಅಹ್ಮದ್ ಪ್ರಸ್ತಾವನೆಗೈದು ಸ್ವಾಗತಿಸಿದರು. ನಕಾಶ್ ಬಾಂಬಿಲ ಸರ್ಟಿಫಿಕೆಟ್ ವಿತರಿಸಿದರು. ಮೊಬೈಲ್ ಟೆಕ್ನಿಶಿಯನ್ ತರಬೇತುದಾರ ಅಬ್ದುಲ್ ಮಜೀದ್ ತುಂಬೆ ವಂದಿಸಿದರು. ಡಿ.ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.